ಕಾವ್ಯ ಸಂಗಾತಿ
ಶುಭಲಕ್ಷ್ಮಿ ಆರ್ ನಾಯಕ
ತಿಳಿಯದಾಗಿದೆ
ಯಾಕೆ ಕ್ರೌರ್ಯ ಯಾಕೆ ಕೊಲೆಯು
ತಿಳಿಯದಾಗಿದೆ
ಪ್ರೀತಿಯೊಳಗೆ ದ್ವೇಷ ಹೇಗೆ
ಅರಿಯದಾಗಿದೆ//೧//
ಮನವು ಕ್ಷೋಭೆಯಲ್ಲಿ ತುಂಬಿ
ಅರಿವು ಮಾಯವಾಗಿದೆ
ಎಲ್ಲ ದಕ್ಕಬೇಕು ಎಂಬ ಗೀಳು
ಹುಚ್ಚ ಹಿಡಿಸಿದೆ//೨//
ದಕ್ಕದಿರಲು ಕೋಪ ತಾಪ ಮನವ
ಸುಟ್ಟು ಹಾಕಿದೆ
ಭಯವು ಇರದೆ ಲಜ್ಜೆ ಬರದೆ
ಧಾರ್ಷ್ಟ್ಯವನ್ನು ಮೆರೆದಿದೆ//೩//
ತಪ್ಪು ಒಪ್ಪ ಕಂಡುಕೊಳುವ ದಾರಿ
ದೂರವಾಗಿದೆ
ಎಲ್ಲ ಸರಿಯೆ ಎಂಬ ಭಾವ ಮನಸಿನಲ್ಲಿ
ಕುಳಿತಿದೆ//೪//
ಗುರಿಯು ಇರದ ದುಷ್ಟ ಚಟಕೆ ಬುದ್ಧಿ
ಭ್ರಮಣೆಯಾಗಿದೆ
ಯೋಚನೆಯ ಮಾಡುವಂಥ ಮನಕೆ ಮಂಕು ಕವಿದಿದೆ//೫//
ಮುಂದೆ ಒದಗೋ ಕೇಡು ಕಂಗಳಿಗೆ
ಕಾಣದು
ಇಂದು ಬಿಸಿಯ ನೆತ್ತರಲ್ಲಿ ದೇಹ ತಂಪಾಗದು //೬//
ಬದುಕಲೆಮಗೆ ಏಕೆ ಬೇಕು ಕ್ರೌರ್ಯ ದ್ವೇಷ
ಮಚ್ಚರ
ಅತಿಯಾದರೆ ಅಮೃತವೂ ವಿಷವೆ ನಮಗೆ ಎಚ್ಚರ//೭//
ಸಾಕು ಮನುಜ ಸ್ವಾರ್ಥ ಭಾವ
ಬಯಸು ಎಲ್ಲರೊಳಿತನು
ದೇವ ಕೊಟ್ಟ ಬದುಕು ಇದುವೆ
ಬಿಟ್ಟು ಬದುಕು ಕೆಡುಕನು//೮//
ಶುಭಲಕ್ಷ್ಮಿ ಆರ್ ನಾಯಕ
ಪ್ರಕಟಣೆಗೆ ಧನ್ಯವಾದಗಳು
ವೆರೀ ನೈಸ್
ಅತ್ಯುತ್ತಮ ಕವಿತೆ