ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೋಣನವರ
ತರಹಿ ಗಜಲ್
ನಾನೂ ಒಂದು ಜೀವವಾಗಿ ನೆಲಕ್ಕೆ ಕಾಲಿಟ್ಟಿದ್ದು ನೀವೇ ಹೆಣ್ಣೆಂದಿರಿ
ನಾನೂ ಸಾಧನೆಯ ದಾರಿಯನ್ನೇ ಅರಿಸಿದ್ದು ನೀವೇ ಅಡ್ಡಿಯಾದಿರಿ
ಆಟ, ನೋಟ , ಊಟ ಉಡುಗೆ ಎಲ್ಲದರಲ್ಲೂ ಹಸ್ತಕ್ಷೇಪವಿತ್ತು
ನಾನೂ ಹಕ್ಕಿಯಂತೆ ಹಾರಲು ಬಯಸಿದ್ದು ನೀವೇ ರೆಕ್ಕೆಮುರಿದಿರಿ
ತರುವ ಆಟಿಕೆಗಳಲ್ಲೂ ಲಟ್ಟಣಿಕೆ ಪಾತ್ರೆಗಳೇ ಸಿಕ್ಕವು ಆಟ ಆಡಲು
ನಾನೂ ಅವನಂತೆ ಚಂಡು ಬ್ಯಾಟನ್ನೇ ಬೇಡಿದ್ದು ನೀವೇ ಬೇಡವೆಂದಿರಿ
ಬರುವ ಹೋಗುವ ಮನೆಮಂದಿ ಎದುರಲ್ಲೆನ್ನ ಹೀಯಾಳಿಸಿದಿರಿ
ಸುರುವ ಹಚ್ಚಿ ಕಾಲ್ಕೆಕೆರೆದು ಜಗಳವಾಡುವುದು ಬೇಡವೆಂದಿರಿ
ಕ್ಷಣದ ಕೆಲವು ನಿರ್ಧಾರ ನುಡಿದಾಗ ಮುಖ ತಿರುವಿದಿರಿ
ಋಣದ ಮಾತಾಡಲು ಬಾಯ್ತೆರೆದಾಗ ಬಿಸಿನೀರ ಸುರಿದಿರುವಿರಿ
ಅಸಂಭವಗಳ ಸರಪಳಿಯ ಮೈ ಕೊಡಹಿ ಎಂದೋ ಕಿತ್ತದ್ದಾಯಿತು
ಸುಸಂಗದಿ ಸಾಗಿ ಶಂಕೆಯ ಹುತ್ತವನ್ನೇ ಒಡೆಯಬಯಸಿದ್ದು ನೀವೇ ಬೇಡವೆಂದಿರಿ
ಅವಳಿಗೇನು ಬೇಕೆಂದು ಅವಳಿಗೇ ಅರಿವಾದ ಪರಿಯ ಬಲ್ಲಿರಾ ಅಣ್ಣ
ಹವಳದಂತ ಸ್ವಯಂ ಪ್ರಭೆಯ ಕಂಡು ನೀವೇ ವಿಸ್ಮಯಗೊಂಡಿರಿ
————————————-
ಶಕುಂತಲಾ ಎಫ್ ಕೋಣನವರ
Super
Super Gajal Shakku
ಮನದಾಳದ ಬೇಗುದಿಯಲಿ ಬೆಂದ ಗಜಲ್