ಎಸ್ಕೆ ಕೊನೆಸಾಗರ-ಬುದ್ಧ ನಮನ


ಯಶೋಧರೆಯ
ತ್ಯಾಗದಿ ಸಿದ್ಧಾರ್ಥನು
ಬುದ್ಧನಾದನು

ಎಲ್ಲ ತೊರೆದೆ,
ನಮ್ಮ ಬಾಳ ಪಥದ
ಬೆಳಕಾದೆ ನೀ

ನೀನು ನಡೆದ
ಹೆಜ್ಜೆಗಳಲ್ಲಿ, ಸತ್ಯ
ಪ್ರಭೆ ಮೂಡಿತ್ತು

ಯಾವ ಬದುಕ
ಮೋಹ ಮಾಡಿತು, ನಿನ್ನ
ಆ ಪಯಣಕೆ

ನಿನ್ನ ಧ್ಯಾನದ
ವದನದಿ ಸೌಖ್ಯದ
ಬೆಳಕು ಇತ್ತು


Leave a Reply

Back To Top