ಪ್ರಮೊದ ಜೊಶೀ ಕವಿತೆ-ಕತ್ತಲ ಕ್ರಾಂತಿ.

ನಿದಿರೆಯಲ್ಲಿರಲು ಎಲ್ಲರು
ಎಚ್ಚರವಾದನು ಈತ.
ಸುಖದ ನಿದ್ರೆ ತೊರೆದು ಹೊರಟ
ಎಚ್ಚರಿತ ಸುಖದ ಕನಸು ಕಾಣುತ.

ಅಳಿವ ಅಳಿತನದ ಕ್ಷಣಿಕ ಸುಖಕೆ
ಅಳಿವ ಜಾತನ ಕ್ಷಣಿಕ ಮೋಹಕೆ
ಅಳಿವ ಮೊದಲು ಎಚ್ಚರಗೊಳ್ಳಲು
ಎದ್ದನೀತ ರಾತ್ರಿಯಲ್ಲೆ.

ಎದ್ದು ಹೊರಟ ಎಲ್ಲ ತೊರೆದು
ಕಾರಿರುಳಿನಲಿ ತಾನು ಮೊದಲು
ಒಂದೊಂದೇ ಬಂಧದ ಕರಿತನ ಇಳಿಸುತ
ಕಪ್ಪಿನೊಳು ತಾನು ಲೀನವಾಗುತ

ಇನಿತು ಬೆಳಕಿಗೆ ಓಡಿತು ಇರುಳು
ನೈಜಿತ ಸತ್ಯಕೆ ಇದುವೇ ತಿರುಳು
ಮಿಥ್ಯ ಸತ್ಯದೊಳು ಹೆಚ್ಚಾಗುವ ಇರುಳು
ಸತ್ಯ ಸತ್ಯಕೆ ಶರಣಾಗುವುದು.

ತೊಲಗಿಸಲೆಲ್ಲರ ಭ್ರಾಂತಿ
ಮಾಡಿದನೀತ ಕತ್ತಲ ಕ್ರಾಂತಿ
ಕ್ರಾಂತಿಯಿಂದಲೇ ಬಿತ್ತಿದ ಶಾಂತಿ
ರವಿಯೊಡನೆ ಬೆಳಗಿಸಿತು ಈತನ ಕಾಂತಿ

ಇದ್ದ ಮುಗ್ದ ಆದ ಪ್ರಬುದ್ಧ
ಕಾಂತಿಯಿಂದ ಜಗವ ಗೆದ್ದ
ಮನದ ಕತ್ತಲೋಡಿಸಿದ ಸಿದ್ಧ
ರವಿಯಂತೆ ಬೆಳಗುತಿಹನೀ ಬುಧ್ಧ..


One thought on “ಪ್ರಮೊದ ಜೊಶೀ ಕವಿತೆ-ಕತ್ತಲ ಕ್ರಾಂತಿ.

Leave a Reply

Back To Top