ಡಾ.ರೇಣುಕಾತಾಯಿ.ಸಂತಬಾ. ಅವರ ಕವಿತೆ-‘ಹಂಗಿಲ್ಲದ ಹಾಡು’

ಹಾಡಬಲ್ಲೆ ನಾನು ಯಾರ ಹಂಗಿಲ್ಲದೆ
ಚಂದಕ್ಕಿಂತ ಚಂದ ನನ್ನ ಹಾಡಲ್ಲವೆ llಪll

ತೋಡಿಕೊಳ್ಳದ ತುಡಿತ ರಾಗದಿ ಹಾಡಿಕೊಂಡೆನು
ಗಾಯಗೊಂಡ ನೋವನೆಲ್ಲ ನೀವಿಕೊಂಡೆನು
ತೊರೆದು ಹೋದ ಮನವನೆಲ್ಲ
ಕರೆಸಿಕೊಂಡೆನು
ಪ್ರೀತಿ ಗೀತಿಯಂತ ಹಾಡಿ
ರಮಿಸಿಕೊಂಡೆನು//

ಅವ್ವನ ಜೋಗುಳ ಜೀಕುತಿದೆ
ಜೊತೆಯಲಿ
ಅಕ್ಕಅಣ್ಣ ತಮ್ಮತಂಗಿ ಬಣ್ಣದ ಚಿತ್ರದಲಿ
ಹಾಡುವಾಗ ನೋವ
ಕೊರಳ ಬಿಗಿದಿದೆ
ಸಂತೈಸಲು ಮಾತೊಂದು ಹಾಡಾಗಿ ಹರಿದಿದೆ//

ಯಾರ ಸ್ಮರಣೆ ರಾಗವಾಗಿ
ಬಂದಿತೋ
ಯಾರ ಒಲವ ಸಾಲಾಗಿ
ಪದ್ಯವಾಯಿತೋ
ಯಾರ ಕರುಣೆ ಕಾವ್ಯವಾಗಿ ಬರೆಯಿತೋ
ಎದೆಯ ಗೂಡಲಿ ಭದ್ರವಾಗಿ ಉಳಿದವೆಷ್ಟೋ//


2 thoughts on “ಡಾ.ರೇಣುಕಾತಾಯಿ.ಸಂತಬಾ. ಅವರ ಕವಿತೆ-‘ಹಂಗಿಲ್ಲದ ಹಾಡು’

Leave a Reply

Back To Top