ವಾಣಿ ಯಡಹಳ್ಳಿಮಠ ಅವರ ಕವಿತೆ-ಪುರಾವೆ

ಅವಳ ಕಂಗಳಲಿ ಒಡೆದ ಸವಿಗನಸುಗಳ
ಯಾವ ತುಣುಕೂ ಕಾಣಿಸಲಿಲ್ಲ
ನಾ ನೆಟ್ಟ ಕನಸಿನ ಯಾವ ಪುರಾವೆಯೂ ಕಾಣಿಸಲಿಲ್ಲ

ಅವಳ ನೋಟವೆನೋ ನನ್ನೆಡೆಗೆ
ತುಸು ನಿಟ್ಟಿಸಿ ಸರಿದು ಹೋಯಿತು
ನನ್ನೊಲವಿನ ಬಿಂಬದ ಯಾವ ಪುರಾವೆಯೂ ಕಾಣಿಸಲಿಲ್ಲ

ತುಟಿಗಳು ನನ್ನೋಡಿ ತುಸುವೂ ಮಿಸುಕಾಡಲಿಲ್ಲ
ಪ್ರೀತಿಯ ಎರಡಕ್ಷರಗಳ ಯಾವ ಪುರಾವೆಯೂ ಕಾಣಿಸಲಿಲ್ಲ

ಅವಳ ಬದಲಾದ ಭಾವಕೆ ನಾ ಬೆರಗಾದೆ
ಏನನೂ ಹೇಳದೆ ಮೌನದ ಮೊರೆ ಹೋದೆ
ನಾನವಳ ಕಡೆಗಣಿಸಿದಕೆ ಕಲ್ಲಾಗಿದ್ದಳು
ಕಟ್ಟಿದ ಪ್ರೇಮ ಸೌಧ ಸಮಾಧಿಯಾಗಿಸಿದ್ದಳು
ಅವಳನೇ ಕಣ್ತುಂಬಿಕೊಂಡು , ಕಂಬನಿ ಮಿಡಿಯುತ
ಕೊನೆಗೊಮ್ಮೆ ತಿರುಗಿದೆ
ಅವಳ ಬದುಕಿನಲಿ, ನಾ ಬದುಕಿರುವ ಯಾವ ಪುರಾವೆಯೂ ಕಾಣಿಸಲಿಲ್ಲ …

2 thoughts on “ವಾಣಿ ಯಡಹಳ್ಳಿಮಠ ಅವರ ಕವಿತೆ-ಪುರಾವೆ

Leave a Reply