ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಕಾಯುತ್ತಿವೆ

ನರಿಗಳು ಕಾಯುತ್ತಿವೆ
ಕುರಿಗಳನ್ನು
ಏಳು ದಶಕಗಳ ಹಿಂದೆ
ಕೆಂಪು ಮಂಗಗಳು
ನಮ್ಮ ನೆಲ ನಮಗೆ
ಕೊಟ್ಟು ಹೋದರು
ಹುಲ್ಲು ಮೇಯ್ದು
ಬದುಕಬೇಕೆನ್ನುವ ನಮಗೆ
ಕಾಡು ಕೋಣ ಎಮ್ಮೆಗಳ
ಭೀತಿ ಕಾಟ ಬೆದರಿ
ನರಿಯ ಆಜ್ಞೆಯಂತೆ
ಪಡಿತರ ಚೀಟಿಯ ಆಹಾರಕ್ಕೆ
ಮಾರು ಹೋಗಿ
ಕೊಟ್ಟಷ್ಟು ತಿಂದು
ದಿನ ನೂಕಿದೆವು
ಅಲ್ಲಿಯೂ ಹೆಗ್ಗಣಗಳದ್ದೇ
ಸಿಂಹ ಪಾಲು
ಉಗ್ರಾಣ ಕಾಯುವ
ನಾಯಿಗಳಿಗಿಲ್ಲ
ಒಪ್ಪತ್ತಿನ ಕೂಳು
ಒಮ್ಮೊಮ್ಮೆ ಕೊಬ್ಬಿದ ಕುರಿಗಳು
ಮಾಯವಾಗುತ್ತಿದ್ದವು
ಅವು ಸೈನ್ಯ ಸೇರಿದವು
ನರಿ ಪತ್ರಿಕಾ ಹೇಳಿಕೆ
ಮರುದಿನ ದೊಡ್ಡಿಯ ಪಕ್ಕದ
ಹಳ್ಳದ ದಂಡೆಯ ಮೇಲೆ
ಕುರಿಗಳ ಉಣ್ಣೆ ಎಲವು ಬಿದ್ದಿದ್ದವು
ದೇವರಿಗೆ ಎಡೆಯಾದವು ಕುರಿಗಳು
ಎಂಬ ನಂಬಿಕೆ ಹುಟ್ಟಿತು
ಹುಲಿ ಸಿಂಹ ಚಿರತೆಯಿಂದ
ರಕ್ಷಿಸುವ ನರಿಯ ಭರವಸೆ
ಹತ್ತು ವರುಷಕ್ಕೊಮ್ಮೆ
ಕುರಿ ಗಣತಿ
ನಮ್ಮೊಳಗಿನ ಒಂದು ಕುರಿ
ನರಿಯ ಅರಮನೆ ಹೊಕ್ಕಿ ನೋಡಿತು
ನಡೆದಿತ್ತು ಕುರಿಗಳ ಮಾರಣ ಹೋಮ
ಪುಲ್ವಾಮಾ ಭೀತಿ ರಾಮನ ಭಕ್ತಿ
ಮತ್ತೆ ಸಾಲಿನಲ್ಲಿ ನಿಂತು
ಮತ ಚಲಾಯಿಸುತ್ತಿದ್ದೇವೆ
ನರಿಗಳು ತೋರಿದ ಚಿಹ್ನೆಗೆ
ಕಾಡು ಉಳಿಸಿ ನಾಡು ಬೆಳೆಸಿ
ಟಿವಿ ಮಾಧ್ಯಮದಲ್ಲಿ
ಕಾಗೆ ಗೂಬೆಗಳ ನಿರಂತರ ಚರ್ಚೆ
ಮತ್ತೆ ಐದು ವರುಷ
ನಾವು ಏನೂ ಹೇಳುವ ಹಾಗಿಲ್ಲ
ನರಿ ಕಾಯುತ್ತಿವೆ
ನಮ್ಮಂತಹ ಕುರಿಗಳನ್ನು

ನಮ್ಮಂತಹ ಕುರಿಗಳನ್ನು


16 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಕಾಯುತ್ತಿವೆ

    1. ಸುಂದರವಾದ ಶಬ್ದಗಳಿಂದ ಅಲಂಕೃತವಾದ ಕವಿತೆ ಸರ್

  1. ಬ್ರಾಹ್ಮಣರ ಅನಾರೋಗ್ಯ, ಅನುಪಯುಕ್ತ ಸಂತಾನಕ್ಕಾಗಿ ರಾಯಧನದ ಅಸಾಧಾರಣ ಲಾಭದಾಯಕ ನಿಬಂಧನೆಗಳು ಬ್ರಾಹ್ಮಣ್ಯವಾಗಿದೆ.

  2. ರಾಜಕೀಯ ವಿದ್ಯಮಾನಗಳ ವಿಡಂಬನಾತ್ಮಕ
    ಕವನ ಎಲ್ಲರೂ ವಿಚಾರವಿಮರ್ಶೆ ಮಾಡುವ ಹಾಗೆ ಮೂಡಿ ಬಂದಿದೆ … ಸರ್

  3. ಕಟು ಸತ್ಯ. ಈ ಕುರಿತು ಎಲ್ಲರೂ ವಿಚಾರಿಸಲೇ ಬೇಕು. ಕುರಿಗಳಂತೆ ಇರುವ ಜನರನ್ನು ಜಾಗೃತಗೊಳಿಸುವ ಕವನ.

  4. ಕಟು ಸತ್ಯ..ಈ ಕುರಿತು ಎಲ್ಲರೂ ವಿಚಾರಿಸಲೇ ಬೇಕು. ಕುರಿಗಳಂತೆ ಇರುವ ಜನರನ್ನು ಜಾಗೃತಗೊಳಿಸುವ ಕವನ.

  5. ಎಷ್ಟು ಕಠೋರ ಸತ್ಯ ಹೇಳುವ ಅತ್ಯಂತ ಸುಂದರ ವಿಡಂಬನೆಯ ಕವನ ಸರ್

  6. ಅತ್ಯಂತ ಮಾರ್ಮಿಕ ವಿಡಂಬನೆ ಸರ್

  7. ಸುಂದರ ಕಟು ಸತ್ಯವನ್ನು ಕಾಣುವ ಹೊಸ ಕವನ ಸರ್

Leave a Reply

Back To Top