ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಚೌ ಚೌ ಬಾತ್
ಒಂದಿಷ್ಟು ಮಾತು
ಒಂದಿಷ್ಟು ಮೌನ
ಹೇಳಲಾರದೆ ಉಳಿದ
ಮಾತು ಮನದಿ ನೂರು
ಕೇಳಿಸಿ ಕೊಂಡವರ
ದೂರು ಹತ್ತು ಹಲವು
ಹರಿವ ತೊರೆಗಳು ನದಿಯ ಸೇರಿ
ನದಿಯು ಸಾಗರವ ಸೇರಿ
ಸಾಗರವು ನದಿಯ
ಆಕ್ರಮಿಸಿದಂತೆ ಒಂದಾಗಿದೆ
ಒಲವಿನಲ್ಲಿ ಜೊತೆಯಾಗಿದೆ
ಮಾತಿಗೆ ಮಾತು ಸೇರಿ
ಸಂಬಂಧ ಗಟ್ಟಿಯಾಗಿದೆ
ಒಂದೇ ಸೂರು ಒಂದೇ ಬಾಳು
ನಲಿಯುತ್ತಿದೆ ಪುಟ್ಟ ಗೂಡು
ಮೇಳೈಸಿದೆ ಸ್ವರ್ಗ ಸುಖ ನೋಡು
ನೋಡಲು ದೊಡ್ಡದಾದ ಸೌಧ
ಎಲ್ಲೆಡೆ ನೆಲೆಸಿದೆ ಮೌನ ಮೌನ
ಇಲ್ಲಿ ಮಾತಿಗೂ ಬರ
ನೆಮ್ಮದಿಯ ಜೀವಕ್ಕೂ ಜ್ವರ ಅಪ್ಪಿಕೊಳ್ಳಲಾಗದ ಸಂಬಂಧ ಬಂಧಿಸಿಡಲಾಗದ ಬಂಧ
ಎಲ್ಲಿದೆ ಒಳಗೆ ಅನುಬಂಧ
ನೋಡುವ ಕಣ್ಣಿಗೆ
ಶ್ರೀಮಂತಿಕೆಯ ಸೌಧ
ಒಳಗೆ ಉಸಿರುಗಟ್ಟುತ್ತಿದೆ
ಶ್ರೀಮಂತಿಕೆಯ ಸಂಬಂಧ
ಇಲ್ಲಿ ಎಲ್ಲವೂ ಗೌಣ ಗೌಣ
ಸಾಗಿದೆ ಬದುಕಿನ ಓಟ
ಅರ್ಥವಾಗದು ಜೀವನದಾಟ
ಅರಿತುಕೊಳ್ಳಬೇಕಿದೆ ಒಗ್ಗಟ್ಟಿನ ಬಲ
ಎಲ್ಲರೂ ಸೇರಿ ನಕ್ಕು ನಲಿಯುತ
ಮಾಡಬೇಕಿದೆ ಜೊತೆಯಾಗಿ ಊಟ
ಕೂಡಿ ಬಾಳುವ ಬದುಕಿನ ಪಾಠ
ನಾಗರಾಜ ಜಿ. ಎನ್. ಬಾಡ
ಮಾತು ಮೌನದ ನಡುವೆ ಒಗಟಾದ ಜೀವಿತ. ಒಲವಲ್ಲಿ ನೆಚ್ಚಿಕೊಂಡ ಭರವಸೆ ಉಸಿರಂತೆ ಉಳಿದು ಕಾಯುವುದು ಬದುಕನ್ನು. ಪ್ರೀತಿಸುವುದು ಉಳಿವನ್ನು. ಗೂಡಿನೊಳಗಿನ ಆಪ್ತತೆ ಒಂದು ಖುಷಿಯ ಅನುಬಂಧ. ಇಷ್ಟೇ ಎಂದು ಎಣಿಸುವುದಿಲ್ಲ. ಬೇಕು ಎಂದು ಕನವರಿಸುವುದಿಲ್ಲ. ಸಾಕು ಎಂದು ಪರಿತಪಿಸುವುದೂ ಇಲ್ಲ. ಚೆಂದದ ಬದುಕಿನ ಆಶಯ ಕವಿತೆಯ ಒಳನೋಟ. ನೂರು ಮಾತಿನೊಟ್ಟಿಗೆ ಸಾಗುವ ದಾರಿಯಲ್ಲಿ ಒಂದು ಖುಷಿಯಿದ್ದರೆ ಅದು ಉಸಿರಿನದ್ದು. ಒಳಿತು ಕವಿತೆಯ ಸಾಲುಗಳಲ್ಲಿನ ಭಾವ ಚೆನ್ನಾಗಿದೆ…….
ನಾಗರಾಜ ಬಿ.ನಾಯ್ಕ
ಹುಬ್ಬಣಗೇರಿ
ಕುಮಟಾ.