ಕಾವ್ಯ ಸಂಗಾತಿ
ರಮ್ಯ ಕೆ ಜಿ ಮೂರ್ನಾಡು
ಗಜಲ್
ತುಸು ಇಲ್ಲೇ ನಿಂತು ಬಿಡು ಮಾತು ಉಳಿದಿದೆ
ಇತ್ತ ಹೊರಳಿ, ಕಣ್ಣ ನೆಡು ಮಾತು ಉಳಿದಿದೆ
ಎಷ್ಟು ಸಾರಿ ಹರಟಿದ್ದೇವೆ ಕಟ್ಟು ಕತೆಗಳ
ಇಷ್ಟೇ ಇಷ್ಟು ಸಮಯ ಕೊಡು ಮಾತು ಉಳಿದಿದೆ
ಕಣ್ಣ ಎವೆಯ ತುಂಬಾ ಜೀಕಿತೆಷ್ಟು ಕನಸು
ಸಣ್ಣ ನೆಪವ ಕೆದಕಿ ಇಡು ಮಾತು ಉಳಿದಿದೆ
ಹೆಕ್ಕಿ ತಂದ ಹೂಗಳಿಗೆ ದಾವಣಿಯನೇ ಹಾಸಿದೆ
ಒಡಲ ತುಂಬಾ ಒಲವ ಉಡು ಮಾತು ಉಳಿದಿದೆ
ಕವಿದ ಮೋಡ ಚದುರಬೇಕು ‘ಪ್ರಾಣವೇ’
ಹೊತ್ತೇರಲಿ, ಬೆಳಕ ತೊಡು ಮಾತು ಉಳಿದಿದೆ
ರಮ್ಯ ಕೆ ಜಿ ಮೂರ್ನಾಡು
ಚೆನ್ನಾಗಿದೆ
Lovely
ತುಂಬು ನನ್ನಿಗಳು “ಸಂಗಾತಿ” ಗೆ…
Nice