ಸವಿತಾ ದೇಶಮುಖ ಕವಿತೆ-ನೀಲಿಬಾನ ಅಂಬರದಿ

ನೀಲಿ ಬಾನ ಅಂಬರದಿ
ಹುಣ್ಣಿಮೆಯ ರಾತ್ರಿಯಲಿ
ಬೆಂದ ಎದೆಗೆತಣ್ಣೆಳಲು
ನೀನು, ನಿರ್ಮಲ ಶುದ್ಧ

ಚೆಲುವಿನ ಆಗರ
ನಿನ್ನ ರೂಪಕ್ಕೆ
ನಾಚಿದಳು ನಾರಿ
ನಿನ್ನ ವರ್ಣಕ್ಕೆ
ತನು ಕರಗಿತು
ಮನ ಕರತಗಿತು
ಎನಿತು ಪೇಳಲಿ
ವರ್ಣನೆಗೆ ಅತಿತll

ಮಂದಹಾಸ ಬೀರುತ
ತಿಳಿ ಮುಗಿಲ ಹಂದರದೆ
ಹೊಳೆಯುವ ಚಂದಿರ
ಮುಗಿಲ ಮಲ್ಲಿಗೆ ನೀನು

ನಿನಗೆ ಮುಟ್ಟುವ
ಕನಸು ನನಸಾಗಿದೆ
ನಿನ್ನ ಮೆಟ್ಟಿ
ಧ್ವಜವ ಉರಿ
ದಕ್ಷಿಣ ಧ್ರುವದ
ಭಾಗವು ನಮ್ಮದು
ಜಯದ ಸಂತಸವು ತೀವೆ
ಬುದ್ಧಿ ಪ್ರಭೇಯನು ಚಾಚಿ

ನಿನಗೆ ಏಣಿ ಕಟ್ಟುವ
ಕಾಲವು ಸನ್ನಿಹಿತ
ನಿನ್ನ ಅಂಗಳದಿ
ನಮ್ಮ ತಾಣ

ದೂರದಿಂದ ನೊರೆ
ಹಾಲು ಗಲ್ಲಿನವನು
ನೀನು ಚಂದಿರಾ
ಒಳಹೊಕ್ಕು ನೋಡಲು
ತುಂಬಾ ಬರೀ
ಮಣ್ಣು ದಿನ್ನೆ
ಆದರೂ ನಾವು ನಿನ್ನ
ಅಕ್ರಮಿಸುವ ಹುನ್ನಾರದಲಿ
ಹತ್ತಿರ ಬಲು ಹತ್ತಿರ
ಈಗ ನೀನು ನಮಗೆ

ಮನುಜರ ಮನಗಳು
ದೂರ ಬಲು ದೂರ

ನೀ ಇಯುವ ಬೆಳಕು ತಂಪು
ಎಲ್ಲರಿಗೂ ಒಂದೇ
ನಾವು ಕಟ್ಟಿದೆವು ಏಣಿ
ಜಾತಿ ಮತ ಪಂಥಗಳ ಮಧ್ಯೆ

ಭೇದಿಸಲಾಗದ ಭೇದದ ಏಣಿ.


One thought on “ಸವಿತಾ ದೇಶಮುಖ ಕವಿತೆ-ನೀಲಿಬಾನ ಅಂಬರದಿ

Leave a Reply

Back To Top