ಶಿಕ್ಷಕಿಯಾಗಿ ಮಾರ್ಗ ತೋರಿದ ಆದರ್ಶ ಮಹಿಳೆಯರು”ಮಾಧುರಿ ದೇಶಪಾಂಡೆ,

[20:12, 04/05/2024] ಸಂಗಾತಿ ಬ್ಲಾಗ್:  ಎಲ್ಲ ವೃತ್ತಿಗಿಂತ ಶಿಕ್ಷಕ ವೃತ್ತಿ ಬಹಳ ಗೌರವ ಪೂರ್ಣವಾದ ವೃತ್ತಿ ಅನೇಕ ವಿದ್ಯಾರ್ಥಿಗಳ ಜೀವನ ಕಟ್ಟಿ ಕೊಟ್ಟ ಹೆಮ್ಮೆ ಶಿಕ್ಷಕರದ್ದಾಗಿರುತ್ತದೆ.  ಕಲಿಸುವ ರೀತಿ, ಶೈಲಿ ಮೊದಲಾದವುಗಳಿಂದ ವಿಶೇಷವಾಗಿ ಜನಪ್ರಿಯ ಗೊಂಡ ಶಿಕ್ಷಕರು ಅನೇಕರು ಇದ್ದಾರೆ. ಹಲವರಿಗೆ ಮನ್ನಣೆ ದೊರೆತಿದೆ. ಇನ್ನು ಕೆಲವರು ಎಲೆ ಮರೆಯ ಕಾಯಿಯಂತೆ ಇದ್ದಾರೆ  ಹೀಗೆ ಎಲೆಮರೆಕಾಯಿಯಂತೆ ಇರುವ ಶಿಕ್ಷಕರನ್ನು ಇಂದು ಪರಿಚಯಿಸೋಣ. ನೀವು ಕಂಡ ಲೆಮರೆ ಕಾಯಿಯಂತಿರುವ ವಿಶೇಷ ಮಹಿಳಾ ಶಿಕ್ಷಕಿಯರ ಪರಿಚಯ ಮಾಡಿಸಿ

ನಾನು ಪರಿಚಯ ಮಾಡುತ್ತಿರುವ ಶಿಕ್ಷಕಿ ಶ್ರೀಮತಿ ಸವಿತಾ ದೇಶಪಾಂಡೆ/ ದೀಕ್ಷಿತ್‌ ಸರಕಾರಿ ಶಾಲೆಯಲ್ಲಿ ಮರಾಠಿ ಮಾಧ್ಯಮದ ಶಿಕ್ಷಕಿಯಾಗಿ ಕೆಲಸ ಮಾಡಿ ನಂತರ ಪದವಿ ಪೂರ್ವ ಕಾಲೇಜಿನ ಕನ್ನಡ ಮಾಧ್ಯಮದಲ್ಲಿ ಕೆಲಸ ಮಾಡಿದ್ದಾರೆ.

ಅವರ ಹೆಸರು ಸವಿತಾ ಹೈದರಾಬಾದಿನ ನಾರಾಯಣ ದೀಕ್ಷಿತ್‌ ಮತ್ತು ಶ್ರೀಮತಿ ಹೇಮಲತಾ ದೀಕ್ಷಿತರ ಮೂರನೇ ಮಗಳಾಗಿ 11-09-1965ರಲ್ಲಿ ಹುಟ್ಟಿದ ಸವಿತಾ ಅವರು ತಮ್ಮ ಪ್ರಾಥಮಿಕ ಹಾಗೂ ಪದವಿ ಶಿಕ್ಷಣವನ್ನು ಆಂಧ್ರದಲ್ಲಿಯೇ ಮಾಡಿದರು. ಸ್ನಾತಕೋತ್ತರ ಪದವಿಯನ್ನು ಗುಲ್ಬರ್ಗಾ ವಿಶ್ವ ವಿದ್ಯಾಲಯದಲ್ಲಿ ಎರಡನೇ ರಾಂಕ್ ನೊಂದಿಗೆ  ಪೂರೈಸಿದರು ಮೈಕ್ರೋಬಯಾಲಜಿ ಇವರ ಅಧ್ಯಯನದ ವಿಷಯವಾಗಿತ್ತು.

 1989ರಲ್ಲಿ ಕರ್ನಾಟಕದ ವಿಜಯಪುರ ಗ್ರಾಮೀಣ ಬ್ಯಾಂಕ್‌ನಲ್ಲಿ ಮ್ಯಾನೇಜರ್‌ ಹುದ್ದೆಯಲ್ಲಿದ್ದ ಗುರುರಾಜ ದೇಶಪಾಂಡೆಯವೃೊಂದಿಗೆ ಇವರ ವಿವಾಹವು ನೆರವೇರಿತು.  90ನೇ ಇಸಿಯಲ್ಲಿ ಮಗನಿಗೆ ಮತ್ತು 92ನೇ ಇಸವಿಯಲ್ಲಿ ಮಗಳಿಗೆ ಜನ್ಮ ನೀಡಿದರು, ತಮ್ಮ ವಿದ್ಯಾರ್ಹತೆಯ ಮೇರೆಗೆ ಸರಕಾರಿ ಶಾಲೆಯಲ್ಲಿ ಕೆಲಸಕ್ಕೆ ಅರ್ಜಿಯನ್ನು ನೀಡಿದ್ದರು.  1994ರ ಸುಮಾರಿಗೆ ಇವರಿಗೆ ರಾಮನಗರದಲ್ಲಿ ಮೊದಲ ಬಾರಿಗೆ ಮರಾಠಿ ಮಾಧ್ಯಮದ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಕಲಿಸಲು ಆರಂಭಿಸಿದರು. ಅವರ ಮಾವನವರು ಆಗಿನ ಕಾಲದ ಕನ್ನಡ ಜಾಣ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು,  ಅವರ ಪ್ರೇರಣೆ ಮತ್ತು ಕಲಿಸುವಿಕೆಯಿಂದ ಕನ್ನಡವನ್ನು ಕಲಿತ ಸವಿತಾರವರು ಪದಬಂಧ ಮಾಡುವುದು ಕನ್ನಡ ಪುಸ್ತಕಳನ್ನು ಓದುವ ಅಭ್ಯಾಸ ಮಾಡಿಕೊಂಡರು.  

15-16  ವರ್ಷಗಳ ಕಾಲ ಜಮಖಂಡಿಯ ಪಿಬಿ ಹೈಸ್ಕೂಲಿನ ಮರಾಠಿ ಮಾಧ್ಯಮದಲ್ಲಿ ಪಾಠ ಮಡಿದ ಸವಿತಾರವರಿಗೆ 2010-2011ರ ಹೊತ್ತಿಗೆ ಪದವಿ ಪೂರ್ವ ಕಾಲೇಜು ಶಿಕ್ಷಕಿಯಾಗಿ ಭಡ್ತಿಯಾಗಿ ವಿಜಯಪುರದ ಹೊನ್ನುಟಿಗೆ ಪದವಿ ಪೂರ್ವಕಾಲೇಜಿಗೆ ವರ್ಗವಾದಾಗ ಇವರು ತಮ್ಮ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಜ್ಞಾನ ವಿಷಷಯವನ್ನು ಕನ್ನಡ ಮತ್ತು ಇಂಗ್ಲೀಷ್‌ ಎರಡೂ ಭಾಷೆಯಲ್ಲಿ ಪಾಠ ಮಾಡುತ್ತಾರೆ.

ಇದೇನು ಮಹಾ ಅವರ ವೃತ್ತಿ ಎನ್ನುವವರು ಇರಬಹುದು ಆದರೆ ಒಬ್ಬ ಮಹಿಳೆ ಮರಾಠಿ ಮಾಧ್ಯಮದಲ್ಲಿ ಕಲಿತು ಅದರಲ್ಲಿ ಪದವಿ ಪಡೆದ ನಂಥರ ಆಂಗ್ಲದಲ್ಲಿ ಮಾತ್ರ ಪಾಠ ಮಾಡದೇ ಸ್ಥಳೀಯ ಭಾಷೆಯನ್ನು ಕಲಿತ ಆ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಶ್ರಮ ಪಟ್ಟು ಕಲಿಸುವ ಅವರ ಬದ್ಧತೆ ಹಾಗೂ ಮಾತೃ ವಾತ್ಸಲ್ಯ ಅವರ ವ್ಯಕ್ತಿತ್ವಕ್ಕೆ ಮೆರುಗನ್ನು ತರುತ್ತದೆ.

ಇಷ್ಟೇ ಅಲ್ಲದೇ ಅವರು ಯಾವ ಊರಿನಲ್ಲಿಯೇ ಇರಲಿ ಯಾವ ಓಣಿಯಲ್ಲಿಯೇ ಇರಲಿ ಒಂದನೇ ತರಗತಿಯಿಂದ ಹಿಡಿದು ಪದವಿ ವರ್ಗದವರಿಗೂ  ಪಾಠವನ್ನು ಹೇಳಿಕೊಡುತ್ತಾರೆ. ವಿಶೇಷವೆಂದರೆ ಆರ್ಥಿಕವಾಗಿ ಅಸಹಾಯಕರಾಗಿವರುವವರಿಗೆ ಉಚಿತ ಪಾಠ ಹೇಳುವುದರ ಜೊತೆಗೆ ಅವರಿಗೆ ಅವಶ್ಯವಿರುವ ಪುಸ್ತಕಗಳನ್ನು ಕೊಡಿಸಿ ಫೀಸ್‌ ಕಟ್ಟಲು ಕೂಡ ಸಹಾಯ ಮಾಡುತ್ತಾರೆ. ಸರಕಾರವಾಗಲೀ ಸಂಘ ಸಂಸ್ಥೆಗಳಾಗಲಿ ಗುರುತಿಸುವುದು ಬಹಳ ಕಡಿಮೆ ಇಂತಹ ಕಾಲದಲ್ಲಿ ನಿಸ್ವಾರ್ಥದಿಂದ ತಮ್ಮ  ಶಿಕ್ಷಕ ವೃತ್ತಿಯನ್ನು ಮಾಡುತ್ತಿರುವ ಶಿಕ್ಷಕಿಗೆ ನಮ್ಮ ನಮನ

One thought on “ಶಿಕ್ಷಕಿಯಾಗಿ ಮಾರ್ಗ ತೋರಿದ ಆದರ್ಶ ಮಹಿಳೆಯರು”ಮಾಧುರಿ ದೇಶಪಾಂಡೆ,

  1. ಶ್ರೀಮತಿ ಮಾದುರಿ ದೇಶಪಾಂಡೆಯವರಿಗೆ ವಂದನೆಗಳು
    ಶಿಕ್ಷಕಿಯಾಗಿ ಮಾರ್ಗ ತೊರಿದ ಆದರ್ಶ ಮಹಿಳೆ ಬಗ್ಗೆ ಲೇಖನ ತುಂಬಾ ಚನ್ನಾಗಿ ಬಂದಿದೆ. ಅವರ ಪ್ರತಿಭೆ ತೋರಿಸಿದಕ್ಕೆ ಎಲ್ಲರಾ ಮೆಚ್ಚಲೇ ಬೇಕು ಅದಕ್ಕಾಗಿ ತಮಗೆ ಅನಂತ ಅನಂತ ವಂದನೆಗಳು ಹಾಗೂ ಅಭಿನಂದನೆಗಳು

Leave a Reply

Back To Top