ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ನಿರ್ಭೀತಿಯ ಪಯಣ

ಬದುಕು ನನಗಾಗಿ ಅಲ್ಲ
ನನ್ನವರಿಗಾಗಿ ಎಂದು
ಬದುಕಿ ಕಳೆದುಕೊಂಡೆ
ನನ್ನ ಬದುಕು
ಈಗ ಹುಡುಕುತ್ತಿದ್ದೇನೆ
ಪುಸ್ತಕದಲ್ಲಿ ಹೊಲದಲ್ಲಿ ಮನೆಯಲ್ಲಿ
ಮನದಲ್ಲಿ ಕಾಣದಾದ ಬದುಕು
ಒಂದಿಷ್ಟು ಆತ್ಮ ಸಂತೃಪ್ತಿಗಾಗಿ
ನೆಮ್ಮದಿಗಾಗಿ ಬದುಕನ್ನು
ರೂಪಿಸಿಕೊಳ್ಳಬೇಕಿದೆ
ಅದು ಕೇವಲ ನನ್ನ ಬದುಕು
ನನ್ನ ಭಾವಗಳಿಗೆ ಮಾತ್ರ ಅವಕಾಶ
ಇಲ್ಲ ಅಲ್ಲಿ ಯಾರ ಯಾವ ಪ್ರವೇಶ.
ಹೊರಗಿಡುವೆ ಮನಸ್ಸಿನ ನೆಮ್ಮದಿ
ಕದಡುವ ವಿಷಯಾದಿಗಳ
ಮನದ ಮುಗ್ಧ ಮೊಲ ಗುಬ್ಬಿಗಳು
ಸಂಸಾರದ ಕಾಡಿನಲ್ಲಿ ಕಳೆದು ಹೋಗುತ್ತವೆ
ಒಮ್ಮೆ ನಿಂತು ನೋಡಿದೆ ನಡೆದ ದಾರಿ
ಎಲ್ಲರೂ ಸುತ್ತಮುತ್ತಲಿನ ಬಂಧು ಬಾಂಧವರೇ
ತಮ್ಮ ಮೂಗಿನ ನೇರಕ್ಕೆ ಬದುಕಿ
ಬಾಳಿ ಹೋಗಿದ್ದಾರೆ ನನ್ನ ಬಳಸಿ
ಅವರಿಗೆ ಬೇಕಾದ ರೀತಿಯಲ್ಲಿ
ಅವರ ನೆರಳಾಗಿ ನಾನು
ಕತ್ತಲಲ್ಲಿ ಕರಗಿ ಹೋದೆ
ನಮ್ಮ ಅಸ್ತಿತ್ವವೇ ಇಲ್ಲದಂತಾಯಿತು
ಬದುಕು ಕಳೆದು ಹೋಗಿದೆ
ಇನ್ನೂ ಹುಡುಕುತ್ತಿದ್ದೇನೆ
ಇನ್ನಾದರೂ ಗಟ್ಟಿಯಾಗಬೇಕೆಂಬ
ಬದುಕು ಕಟ್ಟಿಕೊಳ್ಳುವ ನಿರ್ಧಾರ
ಹುಡುಕುತ್ತಿದ್ದೇನೆ ಕಳೆದ ಬದುಕು
ಮುರಿದು ಕಟ್ಟಲು ಹೊಸ ಮನೆ ಮನ
ಸಿಗುತ್ತದೆ ಕಳೆದು ಹೋದ ಬದುಕು
ನಾನು ಸರಿಯಾಗಿ ಬದುಕುವೆ
ನನಗೆ ತಿಳಿದಂತೆ
ಯಾರ ಹಂಗಿಲ್ಲದ ಭಯವಿಲ್ಲದ
ನಿರ್ಭಿತಿಯ ಪಯಣ
ನನಗೆ ನಾನೇ ತನುವಾಗಿ ನೆರಳಾಗಿ
ನನ್ನ ಭಾವಗಳ ಜೊತೆಗೆ


8 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ನಿರ್ಭೀತಿಯ ಪಯಣ

  1. ಬದುಕು…
    ಕಟ್ಟಿಕೊಳ್ಳುವೆ
    ನನಗಾಗಿ
    ಸೂಪರ್

    ಅಕ್ಕಮಹಾದೇವಿ

  2. ಎಷ್ಟು ವಾಸ್ತವಿಕ ಹಾಗು ಸುಂದರ ಕವಿತೆ ಸರ್

  3. ಎಷ್ಟು ಸೊಗಸಾಗಿದೆ ಕವನ,ಸೂಪರ್ ಸರ್.

  4. ನಿರ್ಭೀತಿಯ ಪಯಣ… ನಿಜವಾಗಲೂ ಎಲ್ಲರ ಜೊತೆಗೆ ಹಂಚಿಕೊಳ್ಳಬೇಕಾದ ಮನದಾಳದ ಸಂದೇಶ… ಇಷ್ಟು ದಿವಸ ಎಲ್ಲರಿಗಾಗಿ ಬದುಕಿದ ಈ ಜೀವ ಈಗ ತನ್ನಷ್ಟಕ್ಕೆ ತಾನೇ… ತನುವಾಗಿ ನೆರಳಾಗಿ ತನ್ನ ಭಾವಗಳ ಜೊತೆಗೆ ಜೀವಿಸಲು ಬಯಸುತ್ತಿದೆ… ಒಮ್ಮೊಮ್ಮೆ ಜೀವನದ ಒಂದು ಘಟ್ಟದಲ್ಲಿ ಎಲ್ಲರಲ್ಲಿ ಮೂಡುವ ಭಾವನೆಗಳನ್ನು ಅತ್ಯಂತ ಸಹಜ ರೀತಿಯಲ್ಲಿ ಕಟ್ಟಿಕೊಟ್ಟಿದ್ದೀರಿ…ಸರ್

    ಸುಶಿ

Leave a Reply

Back To Top