ಆದಪ್ಪ ಹೆಂಬಾ ಅವರ ಕವಿತೆ-ಚಹ ಮತ್ತು ಅವಳು.

ಅವ ಚಿಕ್ಕನ್ನು, ಮಟನ್ನು
ಎಲ್ಲ ಬಿರಿಯಾನೀನೂ ತಿಂತಿದ್ದ
ಅವಳಿಗೋಸ್ಕರ
ಅವಳ ಪ್ರೀತಿಗೋಸ್ಕರ
ಅದನ್ನು ಬಿಟ್ಟೇ ಬಿಟ್ಟ.
ಚಹ ಅವಳಂತೆಯೇ
ಅವನ ಮತ್ತೊಂದು
ವೀಕನೆಸ್ಸು
ಒನ್ಸ್ ಅಗೇನ
ಅವಳ ಪ್ರೀತಿಗೋಸ್ಕರ
ಚಹ ಬಿಡುತ್ತೇನೆ ಅನ್ಕೊಂಡ
ಆಗಲಿಲ್ಲ
ಚಿಂತೆ ಬಿಟ್ಟ
ಎರಡು ಕಪ್ ಚಹ
ಕುಡಿದು ಬಿಟ್ಟ.


Leave a Reply

Back To Top