ವಚನ ಸಂಗಾತಿ
ವಚನ ಮೌಲ್ಯ
ಸುಜಾತಾ ಪಾಟೀಲ್ ಸಂಖ
ಬಯಲ ಬೆರಗಿನ ಸುಖದ ಸವಿಯ ಬೆರಗಲ್ಲದೆ ಕಾಣೆ! ಕಾಣೆನೆಂಬ ನುಡಿಗೆಡೆಯ ಕಾಣೆ!
ಕುರುಹುಗೆಟ್ಟು ಅರಿವ ನೆರೆಯರಿದು
ಬೆರೆಸಿದನೆಂಬ ಬರುನುಡಿಯ ನುಡಿಗೆ
ನಾಚಿದೆನಯಯ್ಯಾ ಗುಹೇಶ್ವರಾ.
*********
12 ನೇ ಶತಮಾನದ ಬಸವಾದಿ ಶರಣರು ಪರಿಸ್ಥಾಪಿಸಿದ ಅನುಭವ ಮಂಟಪ ಜಗತ್ತಿನ ಎಲ್ಲಾ ಸಮಸ್ಯಗಳ ಉತ್ತರ ಸ್ವರೂಪದ ಸಾರ್ವಕಾಲಿಕ ಪರಿಪೂರ್ಣ ಅರಿವಿನ ಮಹಾಮನೆ ಆಗಿತ್ತು .
ಈ ಅರಿವಿನ ಮಹಾಮನೆಯ ಶೂನ್ಯ ಪೀಠಾಧ್ಯಕ್ಷ ಅರಿವಿನ ಬೆಳಕು ಮಹಾಮಹಿಮ ಅಲ್ಲಮಪ್ರಭು ದೇವರು ಆಗಿದ್ದರು.
ಶರಣರ ವಿಮಲಾಂತಕರಣದಿಂದ ಮೂಡಿಬಂದ ಒಂದು ವಚನದ ಭಾವಾರ್ಥ ತಿಳಿದುಕೊಳ್ಳೋಣ ಬನ್ನಿ ಬಂಧು ಭಗೀನಿಯರೇ……
ಬಯಲ ಬೆರಗಿನ ಸುಖದ ಸವಿಯ ಬೆರಗಲ್ಲದೆ ಕಾಣೆ! ಕಾಣೆನೆಂಬ ನುಡಿಗೆಡೆಯ ಕಾಣೆ!
ಪರವಸ್ತುವು ಪರಮಾತ್ಮ ಬಟಟ್ಟಬಯಲು.ಅದರ ಇರುವಿನ ಪರಿ ಅದ್ಭುತ.ಅದರಿಂದ ಉತ್ಪತ್ತಿಯಾಗುವ ಸಮರಸಸುಖದ ಸವಿಯೂ ಅತ್ಯಧ್ಭುತ.
ಅದನ್ನು ಶರಣರು ಭಾವದೃಷ್ಟಿಯಿಂದ ಕಂಡು,
ಅದನ್ನು ಶರಣರು ಅಭಿನ್ನಭಾವದಿಂದ ಬೆರೆಸಿ, ಅನುಭವಿಸಿದ ಬಳಿಕ ಕಾಣಲೂ ಅನುಭವಿಸಲೂ ಮತ್ತೆ ಇನ್ನೇನಿದೆ? ಎಂದು ಆತ್ಮಾವಲೋಕನದ ಪ್ರಶ್ನೆ ಹಾಕಿಕೊಳ್ಳುತ್ತಾರೆ ಮಹಾಮಹಿಮ ಅಲ್ಲಮಪ್ರಭು ದೇವರು.
ಅವರು ಹೇಳುತ್ತಾರೆ ನಾನು ಕಾಣುವುದನ್ನೆಲ್ಲ ಕಂಡೆ,
ನಾನು ಅನುಭವಿಸುವುದನ್ನೆಲ್ಲ ಅನುಭವಿಸಿದೆ, ಇನ್ನೂ ಉಳಿದದ್ದು ಬಟ್ಟ ಬಯಲು, ಬಯಲು………!
ಅಲ್ಲಿ ಬರೀ ಉಳಿದದ್ದು ಆ ಪರಮಚಿದ್ಬಯಲ ರೂಪದಲ್ಲಿ?
ನಾನು ಏನು ಕಾಣೆನು,
ಅವರ ಇನ್ನು ಕಾಣೆನು ಎಂಬ ನುಡಿಗೆ ಅವಕಾಶವೇ ಇಲ್ಲ.
ನಾನು ತನುವಿನ ಮೋಹವನ್ನು ಅಳಿದೆ, ನನ್ನ ಮನದ ಸಂಚಲವ ನಿಲ್ಲಿಸಿದೆ,
ನನ್ನಲ್ಲಿರುವ ಉನ್ಮನದ ಮೇರೆ ಮೀರಿದೆ,
ಮಹಾಮಹಿಮ ಅಲ್ಲಮಪ್ರಭು ದೇವರು ಮುಂದು ವರೆದು ಹೇಳುತ್ತಾರೆ.
ಕುರುಹುಗೆಟ್ಟು ಅರಿವ ನೆರೆಯರಿದು
ಬೆರೆಸಿದನೆಂಬ ಬರುನುಡಿಯ ನುಡಿಗೆ
ನಾಚಿದೆನಯಯ್ಯಾ ಗುಹೇಶ್ವರಾ.
‘ನಾನು’ ಎಂಬ ಭಾವದ ಕುರುಹುಗೆಟ್ಟೆ;
ಪರಮ ಅರಿವಿನ ಮಹದಾದ ಘನವನ್ನು ಅರಿತು ಆ ಅರಿವಿನೊಳಗೆ ಬೆರೆದು ನಿಂದೆ ಎಂದು ಹೇಳಿ, ಮತ್ತೇ ಮುಂದೆ ಹೇಳುತ್ತಾರೆ ಬೆರೆದೆನು ಎಂಬ ಭಾವ ಕೂಡ ಅಡಗಿಹೋಯಿತು ಎನ್ನುತ್ತಾರೆ, ಮಹಾಮಹಿಮ ಅಲ್ಲಮಪ್ರಭು ದೇವರು.ಎಂತಹ ಅಧ್ಭುತ ಅರಿವಿನ ಚಿಧ್ಭೇಳಕು ಶರಣರದ್ದು ……….! ಈ ವಚನದಲ್ಲಿಯ ಪ್ರತಿ , ಭಾವ ನೋಡಿದಾಗ ಮೈ ಮನ ರೋಮಾಂಚನಗೊಳ್ಳುತ್ತದೆ .
ಶರಣ ಮಹಾಮಹಿಮ ಅಲ್ಲಮಪ್ರಭು ದೇವರು ಕೊನೆಯದಾಗಿ ಹೇಳುತ್ತಾರೆ,
ನಾನು ಎಂಬುದೂ ಇಲ್ಲ…..,
ಗುಹೇಶ್ವರನೆಂಬುದು ಇಲ್ಲ…….,
ಏನೂ ಇಲ್ಲ …….,
ಏನು ಇಲ್ಲದ ಬರಿ ಬಯಲು…….!
ಸುಜಾತಾ ಪಾಟೀಲ ಸಂಖ