ಎಸ್. ಲಲಿತ ಅವರ ಕೃತಿ “ಮುಕ್ತಕ ಮಲ್ಲಾರ” ಒಂದು ಅವಲೋಕನ ಹೆಚ್. ಎಸ್. ಪ್ರತಿಮಾ ಹಾಸನ್

ಬಹಳವದು ತಿಳಿದಿರಲು  ಜಂಭವನು  ತೋರದಲೆ
 ಸಹನೆಯನು  ತೋರುತಲಿ ನಡೆಯುತಿರಲು
 ಸಹಿಸುತಲಿ ಸಾಗುತಿರೆ ಸಾಧನೆಯು ನಮದೆಂದು
 ಕಹಿಯನ್ನು ನೀಡದಲೆ ಲಕ್ಷ್ಮಿ ದೇವಿ…… .

 ಬಹಳವನ್ನು ತಿಳಿದುಕೊಂಡಿದ್ದರು ಸಹ ಯಾವುದೇ ರೀತಿ ಜಂಬವನ್ನು ತೋರದಂತೆ  ಎಲ್ಲರೊಂದಿಗೆ ಸರಳತೆಯಲ್ಲಿ, ಸಹನೆಯಲ್ಲಿ  ನಗು ಮುಖದಲ್ಲಿ ನಡೆಯುತ್ತಿರುವವರು ಎಂತಹ ಸಮಸ್ಯೆಗಳು ಬಂದರು ಸಹಿಸಿಕೊಳ್ಳುತ ಸಾಗಿದರೆ ಮಾತ್ರ  ಸಾಧನೆಯು ನಮ್ಮದಾಗುತ್ತದೆ ಎಂದು ತಿಳಿದವರು. ಕಹಿಯನ್ನು ಯಾರಿಗೂ ನೀಡದಂತೆ ಸಿಹಿಯನ್ನು ನೀಡುತ್ತಾ ಸಾಗುವವರು. ಒಟ್ಟಾರೆ ಯಾರಿರಬಹುದು ಎಂದು ಯೋಚಿಸುತ್ತಿದ್ದೀರೇನು? ಅವರೇ ನಮ್ಮ ನೆಚ್ಚಿನ ಜನಪ್ರಿಯ ಲೇಖಕಿ ಎಸ್ ಲಲಿತ ರವರು  ಮುಕ್ತಕ ಸಾಹಿತ್ಯ  ಕ್ಷೇತ್ರದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸುತ್ತಾ  ಎಲ್ಲರಿಗೂ ಪ್ರೇರಣಾ ಶಕ್ತಿಯಾಗಿರುವವರು. ಹಲವಾರು ಕೃತಿಗಳನ್ನು ಲೋಕಾರ್ಪಣೆ ಮಾಡಿರುವ ಇವರು ಇನ್ನೂರಕ್ಕೂ ಹೆಚ್ಚು  ಮುಕ್ತಕಗಳನ್ನು ಈ ಕೃತಿಯಲ್ಲಿ  ರಚಿಸಿದ್ದಾರೆ. ಮುಕ್ತಕ ಮಲ್ಲಾರದ ಪುಸ್ತಕವು ಮೊದಲನೆಯ ಆವೃತ್ತಿಯಾಗಿದ್ದು  2020 ನೇ  ಸಾಲಿನದು. ಒಟ್ಟು 112 ಪುಟಗಳನ್ನು ಒಳಗೊಂಡಿದೆ. ಬೆಲೆ 110 ರೂಪಾಯಿ ಆಗಿದೆ. ಅರ್ಪಣೆಯನ್ನು  ರಾಘವೇಂದ್ರ ಸ್ವಾಮಿಗಳಿಗೆ ಅರ್ಪಿಸಿದ್ದು. ಮುನ್ನುಡಿಯನ್ನು ಮುಕ್ತಕದ ಗುರುಗಳಾದಂತಹ. ಶಿಕ್ಷಕರು ಮತ್ತು ಮುಕ್ತಕ ಕೃಷಿಕ  ಮೈಸೂರು. ಹಾಗೂ ಕರ್ನಾಟಕ ರಾಜ್ಯ ಮುಕ್ತಕ ಪರಿಷತ್ತಿನ ಅಧ್ಯಕ್ಷರಾದಂತಹ  ಶ್ರೀ  ಎಂ ಮುತ್ತುಸ್ವಾಮಿ  ರವರು ಬರೆದಿದ್ದಾರೆ. ಈ ಮುನ್ನುಡಿಯಲ್ಲಿ ಕವಯತ್ರಿ ಎಸ್. ಲಲಿತ  ರವರ ಮುಕ್ತಕಗಳ ಬಗೆಗಿನ ವಿವರಣೆಗಳನ್ನು ಎಳೆ ಎಳೆಯಾಗಿ  ಓದುಗರ ಮನ ಮುಟ್ಟುವಂತೆ ಬರೆದಿದ್ದಾರೆ.
 ಮುಕ್ತಕವು  ಆರು ಪ್ರಾಸಗಳನ್ನು  ಒಳಗೊಂಡಿದೆ. ಇವರು ಎಲ್ಲಾ ಪ್ರಾಸಗಳನ್ನು ಬರೆಯುವ ಸಾಮರ್ಥ್ಯವನ್ನು ಒಳಗೊಂಡಂತ ಕವಯತ್ರಿ. ಯತಿ, ಮಾತ್ರೆ, ಗಣ, ಪ್ರಾಸಗಳನ್ನು ಹಿಡಿದು  ಗಜ, ಸಿಂಹ, ಅಜ, ವೃಷಭ, ಹಯ, ಶರಭ ಪ್ರಾಸಗಳಲ್ಲಿ  ಛ0ದೋಬದ್ಧವಾಗಿ  ರಚಿಸುವುದನ್ನು  ಕಲಿತಿರುವ ಇವರು ಮುಕ್ತಕಗಳನ್ನು ರಚಿಸುವುದನ್ನು  ಕಲಿಸಿದಂತಹ ಗುರುಗಳಿಂದ ಹಿಡಿದು  ಹಲವರಿಗೆ ಕೃತಜ್ಞತೆಯನ್ನು “ಮುಕ್ತಕ  ಮಲ್ಲಾರದ ಹಿಂದಿನ ಮಾತುಗಳು” ಎಂಬ ನುಡಿಯಲ್ಲಿ ತಿಳಿಸಿದ್ದಾರೆ. ಈ ಪುಸ್ತಕದ  ಎಲ್ಲ ಮುಕ್ತಕದ ರಚನೆಯು ಬಹಳ ಅರ್ಥಪೂರ್ಣವಾಗಿ ರಚಿಸಿದ್ದಾರೆ.
ಆನಂತರದಲ್ಲಿ ಬೆನ್ನುಡಿಯನ್ನು ಶ್ರೀ  ರಾಜಶೇಖರ  ಕದಂಬ ರವರು ರಂಗ ಕರ್ಮಿ, ಕಾರ್ಯಧ್ಯಕ್ಷರು. ಕರ್ನಾಟಕ ಮುಕ್ತ ಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಇವರು  ಬೆನ್ನುಡಿಯನ್ನು ಬರೆದಿದ್ದಾರೆ. ಆನಂತರದಲ್ಲಿ  ಇನ್ನೂರುಕ್ಕಿಂತಲೂ ಹೆಚ್ಚು  ಮುಕ್ತಕಗಳನ್ನು ಕಾಣಬಹುದು .


” ಕರಿಮುಖನೆ  ಶಿವಸುತನೆ  ಬೇಡುವೆನು ವರವೊಂದ
 ಬರೆಯುವೆನು ಮುಕ್ತಕವ ಪದವ  ಪೋಣಿಸುತ
 ಸರಿಯೆಣಿಸು ನೀ ಎನ್ನ ಬರವಣಿಗೆ ರೀತಿಯನು
 ಕರಮುಗಿದು ಬೇಡುವೆನು – ಜಾನಕೀರಮಣ…..


 ನೋಡಿ ಈ ಮೇಲ್ಕಂಡ ಮುಕ್ತ ಕವು ಪ್ರಾರಂಭದ ಮುತ್ತಕವಾಗಿದೆ. ಗಣಪತಿಗೆ ಬೇಡುತಲಿ  ಪದಗಳನ್ನು ಕೂಡಿಸಿ ನಾನು ಮುಕ್ತಕವನ್ನು ಬರೆಯಬೇಕೆಂದಿದ್ದೇನೆ. ಸಹಕಾರವನ್ನು ನೀಡು ಎಂದು ಕೇಳುತ್ತಾ ಸರಿಯಾಗಿ ಬರೆಯುವಂತೆ ನನಗೆ ಆಶೀರ್ವಾದವನ್ನು ಮಾಡು ಎಂದು ಕೈಮುಗಿದು ಬೇಡುತ್ತಿದ್ದಾರೆ. ಮೇಲಿನ ಮುಕ್ತ ಕವು ಬಹಳಷ್ಟು ಅರ್ಥಪೂರ್ಣವಾಗಿದ್ದು. ಬರವಣಿಗೆ ಪ್ರಾರಂಭ ಎಂಬುದನ್ನು  ಸೂಚಿಸುತ್ತಿದೆ. ಪ್ರಾರಂಭದಲ್ಲಿ ಯಾವ ತೊಡುಕುಗಳು ಬಾರದಂತೆ ನನಗೆ ಮಾರ್ಗದರ್ಶನವನ್ನು ನೀಡಿ ಎಂದು ಕೇಳುತ್ತಿದ್ದಾರೆ. ದೇವರ ಆಶೀರ್ವಾದವನ್ನು ಕೇಳುತ್ತಿದ್ದಾರೆ.


 ” ಮಳೆಯಿಂದ ಗಗನದಲಿ ಮೇಘಗಳ ಚಿನ್ನಾಟ
 ಎಲೆಯಲ್ಲಿ ಜಲ ರಾಶಿ ಉಕ್ಕಿ ಹರಿಯುತಿದೆ
ಕೊಳೆಕಳೆದು  ಬೆಳೆ ಬಂದು ತುಂಬುವುದು ಕಣಜವನು
 ಹೊಳೆ ಹಿಕ್ಕಿ ನೆಲೆಯುತಿದೆ – ಜಾನಕೀರಮಣ”….


 ಇಲ್ಲಿ ಕವಯತ್ರಿಯ  ಬಾವ ನೋಡಿದರೆ ತಿಳಿಯುವುದು  ಬಹಳವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು . ಮಳೆಗಾಲದ ಘನನೀಲ ಮೇಘಗಳು ನಿಧಾನವಾಗಿ ಸಾಗುತ್ತಾ ಮುಚ್ಚುವಂತೆ ಹರಡಿಕೊಳ್ಳುತ್ತ ಸಾಗಿ ಕೊನೆಗೊಮ್ಮೆ ಮಳೆಯಾಗಿ ಸುರಿಯುತ್ತದೆ. ಗಗನದಿಂದಿಳಿದ ಜಲ ರಾಶಿಯ ಮೇಲೆ ಉಕ್ಕಿ ಹರಿಯುತ್ತದೆ ಭುವಿಯ ಕೊಳೆಗಳನ್ನು  ತೊಳೆದು ಶುಭ್ರಗೊಳಿಸುತ್ತದೆ. ಎಂಬುದನ್ನು ಅರ್ಥಗರ್ಭಿತವಾಗಿ ತಿಳಿಸಿದ್ದಾರೆ. ಓದುಗರ ಮನಸ್ಸನ್ನು ಸೆಳೆಯುವಂತಹ ಪದಸಂಪತ್ತುಗಳು ಈ ಮುಕ್ತಕಗಳಲ್ಲಿ ಇವೆ.
 ಇವರ ಪ್ರತಿಯೊಂದು ಮುಕ್ತಕದಲ್ಲೂ ಒಂದೊಂದು ಸಾರವಿದೆ. ಜೀವನದಲ್ಲಿ ತಿಳಿದುಕೊಳ್ಳಬೇಕಾದ ಅಂಶಗಳನ್ನು ಒಳಗೊಂಡಿದೆ. ಅರಿತುಕೊಂಡು ಬಾಳಲು ಮಾರ್ಗದರ್ಶನಗಳಿವೆ. ಪ್ರತಿಯೊಂದು ಮುಕ್ತಕದಲ್ಲೂ ಅರ್ಥಪೂರ್ಣವಾದ ಅಂಶಗಳನ್ನು ಒಳಗೊಂಡಂತಹ ಶಬ್ದ ಭಂಡಾರ  ಇದ್ದು ಭಾವಾರ್ಥಗಳಿಂದ ಅದರ ಅರ್ಥಗಳನ್ನು ತಿಳಿದುಕೊಳ್ಳಬಹುದು  . ಅದರಲ್ಲಿ ಮತ್ತೊಂದು ಮುಕ್ತಕವೆಂದರೆ  


” ಹೊಣೆಯರಿತು ನಡೆವವನು ಮಾನ್ಯನವ ಜಗದೊಳಗೆ
 ಮಣಿಯುವ ಬದುಕುವನು ಜಯವ ಕಾಣುತಲಿ
 ಹಣವಿರುವ ಧನಿಕನವ ಬಂಧಿತನ ಸರ್ವರೊಳು
 ಗುಣವಂತ ದುಃಖಿತನು  – ಜಾನಕೀರಮಣ”…..


ತನ್ನ ಜವಾಬ್ದಾರಿಯನ್ನು ತಿಳಿದು ಅದರಂತೆ ನಡೆಯುವವನು ಜಗತ್ತಿನಲ್ಲಿ ಮನ್ನಣೆಯನ್ನು ಗಳಿಸುತ್ತಾನೆ ಎಂಬುದನ್ನು ತಿಳಿಸಿದ್ದಾರೆ. ಬಾಗುವ ಮನಸನ್ನು ಹೊಂದಿರುವ ಪ್ರತಿಯೊಬ್ಬರೂ ಸಹ ಜಯಶೀಲರಾಗುತ್ತಾರೆ ಎಂಬುದನ್ನು ತಿಳಿಸಿದ್ದಾರೆ ಬಾಗುವುದು ಸಾತ್ವಿಕ ಗುಣವಾಗಿದೆ ಎಂದು ತಿಳಿಸಿದ್ದಾರೆ ಆರ್ಥಿಕವಾಗಿ ಶಸಪ್ತನಾದವನು ಒಂದುಸಲ್ಪಡುತ್ತಾನೆ ಎಂಬುದನ್ನು ತಿಳಿಸಿದ್ದಾರೆ . ಎಷ್ಟೇ ಗುಣವಂತನಾದರೂ ಸಹ ದುಃಖವನ್ನು ಅನುಭವಿಸಲೇಬೇಕು ಎಂಬುದನ್ನು ಸಹ ತಿಳಿಸಿದ್ದಾರೆ ಪ್ರತಿಯೊಂದರಲ್ಲೂ  ಹಣದ ಮಹತ್ವ ಹೆಚ್ಚಿದೆ ಎಂಬುದನ್ನು  ಅರ್ಥೈಸುವುದರಲ್ಲಿ ಯಶಸ್ವಿಯಾಗಿದ್ದಾರೆ. “ಸರ್ವೆ ಗುಣಾ: ಕಾಂಚನಮಾಶ್ರಯಂತಿ”ಎಂದು ಸುಭಾಷಿತವೂ ಜಗತ್ತಿನ ಈ ಕ್ರಮವನ್ನು ತಿಳಿಸುತ್ತದೆ ಎಂಬುದನ್ನು ತಿಳಿಸಿದ್ದಾರೆ. ಪ್ರತಿಯೊಂದು ಮುಕ್ತಕವು ಅರ್ಥಗರ್ಭಿತವಾಗಿದೆ. ಇಂತಹ   ಅರ್ಥಗರ್ಭಿತವಾದಂತಹ ಮುಕ್ತಕ ಮತ್ತು ಅದರ ಸಾರಾಂಶವನ್ನು  ಈ ಪುಸ್ತಕದಲ್ಲಿ ಕಾಣಬಹುದು. ಮತ್ತೊಂದು ಉದಾಹರಣೆಯ ಮುಕ್ತಕವೆಂದರೆ  


” ಮಸ್ತಕದಿ ವಿಷಯಗಳ ಮೂಟೆಯನು  ಹೊತ್ತಿರಲು
 ಪುಸ್ತಕದ ಹಾಳೆಗಳ ನೆರವು ದೊರೆತಿರಲು
 ಹಸ್ತದಲಿ ಕಾಯಕವ ಮಾಡುತ್ತ ಸಾಗಿರಲು  
 ವಿಸ್ತರಿಪ ಮನವಿಹುದು -ಜಾನಕೀರಮಣ”…..


 ಮಸ್ತಕದಲ್ಲಿ ಹಲವಾರು ವಿಚಾರಗಳನ್ನು ಮೂಟೆಗಳಲ್ಲಿ ಹೊತ್ತುಕೊಂಡು ಪುಸ್ತಕದ ಹಾಳೆಯನ್ನು ಬಳಸಿಕೊಂಡು ಬರೆಯುವುದೆಂದರೆ ಅದು ಒಂದು ಕಾರ್ಯ ವಿದ್ದಂತೆ ಎಂಬುದನ್ನು  ತಿಳಿಸಿದ್ದಾರೆ. ಅದೇ ರೀತಿ ವಿಸ್ತರಿಪ ಮನವಿದು ಜಾನಕಿ ರಮಣ ಎಂದು ತಿಳಿಸಿದ್ದಾರೆ.


” ಕುಂಬಾರ ಮಾಡಿಹನು ಮಣ್ಣಿನಲಿ ಮಡಕೆಗಳ
 ತುಂಬಿರಲು ಧಾನ್ಯಗಳು ಸಿರಿಯ ಬಿಂದಿಗೆಯು
 ಬಿಂದಿಕುತ ಧರೆಯನ್ನು ಹೇಳುತಲಿ ಕಥೆಯೊಂದ
 ನಂಬಿಸಿವೆ  ಉದರವನು  -ಜಾನಕೀರಮಣ”….


 ಕುಂಬಾರನು ಮಣ್ಣಿನಿಂದ ಮಡಿಕೆಯನ್ನು ಮಾಡುತ್ತಾನೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಂತಹ ವಿಚಾರವೇ. ಅಂತಹ ಕುಂಬಾರ ಮಾಡಿದ ಮಡಿಕೆಯಲ್ಲಿ ಕಾಳುಗಳನ್ನು ತುಂಬಿ ಅದು ಧರೆಗೆ ಒಂದು ಕಥೆಯನ್ನು ಹೇಳುತ್ತಿದೆ. ಎಲ್ಲರ ಹೊಟ್ಟೆ ಗಳನ್ನು ತುಂಬಿಸುವಂತಹ ಕಾಳುಗಳು ಎಲ್ಲರ ಹಸಿವನ್ನು ಹೋಗಲಾಡಿಸುತ್ತದೆ. ಎಂಬುದನ್ನು ತಿಳಿಸುತ್ತದೆ ಎಂಬುದನ್ನು ತಿಳಿಸಿದ್ದು. ನಂತರ ಕಟ್ಟ ಕಡೆಯ ಮುಕ್ತಕವಾದಂತಹ


” ಇಷ್ಟು ಮುಕ್ತಕಗಳನು  ಬರೆದರೂ ತಣಿಯದಿದು  
 ಎಷ್ಟು ಮಾತ್ರಕೆ  ಸರಿಯೊ  ಎಂಬ ಗೊಂದಲವು
 ಅಷ್ಟು ಬಾರಿಯು  ಮನವು ಮಿಡಿತಿಹುದು ಭಯದಲ್ಲಿ
 ಕಷ್ಟವದು ಬರವಣಿಗೆ -ಜಾನಕೀರಮಣ”…..


 ಕಟ್ಟ ಕಡೆಯ ಮುಕ್ತಕವಾದಂತಹ ಈ ಮುಕ್ತಕದಲ್ಲಿ ಬಹಳ ಅರ್ಥಪೂರ್ಣವಾಗಿದೆ ಅವರ ಮನಸ್ಸಿನ  ಭಾವನೆಯನ್ನು ತಿಳಿಸಿದ್ದಾರೆ. ಪ್ರಸಿದ್ಧ ಕವಯತ್ರಿಯಾದರೂ ಸಹ ಅವರ ದೊಡ್ಡತನವನ್ನು ನಾವು ಇಲ್ಲಿ ನೋಡಬಹುದು. ಇಷ್ಟು ಮುಕ್ತಕಗಳನ್ನು ರಚಿಸಿದರು ಮನಸ್ಸು ನೆಮ್ಮದಿಯನ್ನು ಕಾಣುತ್ತಿಲ್ಲ ಪ್ರತಿ ಬಾರಿಯೂ ಮನಸ್ಸು ಬರೆಯುವ ಸಮಯದಲ್ಲಿ ಭಯದಿಂದ ಮಿಡುಕುತ್ತಲೆ ಇರುತ್ತದೆ ಯಾಕೆಂದರೆ ಸಾಹಿತ್ಯದ ನಿರ್ಮಾಣ ಕಷ್ಟ ಎನ್ನುವ ಭಾವ ಮನದಲ್ಲಿ ಅಚ್ಚೊತ್ತಿದೆ  ಎಂಬುದನ್ನು ತಿಳಿಸಿದ್ದಾರೆ.
 ಒಟ್ಟಾರೆ ಕವಯತ್ರಿಯ ಈ “ಮುಕ್ತಕಮಲ್ಲಾರ” ಎಂಬ ಕೃತಿಯು ಬಹಳಷ್ಟು ಬದುಕಿನ ಅಚ್ಚರಿಗಳನ್ನು ಒಳಗೊಂಡಿದೆ.230 ಮುಕ್ತಕಗಳನ್ನು ಒಳಗೊಂಡಿರುವ ಈ ಮುಕ್ತಕ ಕೃತಿಯು ಮುಕ್ತಕದ  ಜೊತೆಗೆ  ಮುಕ್ತಕದ ಭಾವಾರ್ಥವನ್ನು  ಒಳಗೊಂಡಿರುವುದರಿಂದ ಪ್ರತಿಯೊಬ್ಬರಿಗೆ ಸರಳವಾಗಿ ಅರ್ಥವಾಗುತ್ತದೆ. ಮುಕ್ತಕಗಳನ್ನು ರಚಿಸಿ  ನಂತರ   ಮುಕ್ತಕಗಳೇ  ಆದರೆ ಅದರ  ಅರ್ಥವನ್ನು ತಿಳಿದುಕೊಳ್ಳುವುದು ಓದುಗರಿಗೆ  ಕಷ್ಟ ಎಂದು ಅರಿತ ಕವಯತ್ರಿಯು ಅದರ ಭಾವಾರ್ಥಗಳನ್ನು ಇಲ್ಲಿ  ಬರೆದಿರುವುದು ಓದುಗರಿಗೆ  ಗೊಂದಲಕ್ಕೆ ಈಡು ಮಾಡುವುದಿಲ್ಲ.ಅರ್ಥಪೂರ್ಣವಾದ ಮುಕ್ತಕಗಳನ್ನು  ರಚಿಸಿ ಸಾಹಿತ್ಯ ಲೋಕದಲ್ಲಿ  ವಿಶೇಷವಾದ ಸ್ಥಾನಮಾನ ಪಡೆದಿದ್ದಾರೆ. ಸರಳ ಸಜ್ಜನಿಕೆಯ ಗುಣವನ್ನು ಒಳಗೊಂಡಿರುವ ಎಸ್. ಲಲಿತಾ ರವರು ಹಲವಾರು ಕೃತಿಗಳನ್ನು ಲೋಕಾರ್ಪಣೆಗೊಳ್ಳಿಸಿದ್ದಾರೆ. ಇನ್ನು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುಗರ ಮಡಿಲಿಗೆ ಮತ್ತು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿ ಇವರ ಕೀರ್ತಿ ಎಲ್ಲೆಡೆಯೂ  ಪಸರಿಸಲಿ  ಎಂದು ರಾಘವೇಂದ್ರ ಸ್ವಾಮಿಗಳನ್ನು ಮತ್ತು ಲಕ್ಷ್ಮಿ ದೇವಿಯನ್ನು  ಕೇಳಿಕೊಳ್ಳುತ್ತೇನೆ. ಜೈ ಹಿಂದ್ ಜೈ ಕರ್ನಾಟಕ ಮಾತೆ.


Leave a Reply

Back To Top