ಲೇಖನ ಸಂಗಾತಿ
ಮಾಧುರಿ ದೇಶಪಾಂಡೆ
“ಪ್ರಚಾರ ಪ್ರಸಾರಕ್ಕೆ ಒಂದು ಚೌಕಟ್ಟು ಇದೆಯೇ?…”
ಈ ಜಾಹೀರಾತು ಪ್ರಚಾರ ಪ್ರಸಾರಕ್ಕೆ ಚೌಕಟ್ಟು ಇತಿ ಮಿತಿ ಇದೆಯೇ? ಇಂತಹ ಪ್ರಶ್ನೆ ಏಕೆ ಹುಟ್ಟಿತು ಎಂದರೆ ಈತ್ತೀಚಿಗೆ ಫೇಸ್ ಬುಕ್ ಒಳಗೆ ವೆಲ್‌ನೆಸ್ ಕೋಚ್ ಎಂದು ಬರುತ್ತಾರೆ ಅವರುಗಳದ್ದು ಸಾಮಾನ್ಯ ಯಾವ ವಯಸ್ಸಿನವರಾದರೂ ಅವರ ಸಲಹೆ ಪಡೆಯಬಹುದು. ನನಗೆ ಇಂದು ಒಂದು ಸಂದೇಶ ಫೇಸ್ ಮೆಸ್ಸಂಜೆರ್‌ನಲ್ಲಿ ಬಂದಿತು ಕಾಲೇಜಿನ ಮಾಹಿತಿ ಇತ್ತು ಹೆಸರು ಪರಿಚಿತ ಎನಿಸಿತು ಏಕೆಂದರೆ ಅದೇ ಹೆಸರಿನ ಸಾಹಿತಿಯೊಬ್ಬರು ಪರಿಚಯವಿದೆ ಅವರೇ ಇರಬಹುದೆಂದು ನಂಬರ್ ಕೊಟ್ಟೆ.
ಮುಂದೆ ಆತ ಕರೆ ಮಾಡುವೆ ಎಂದಾಗ ನಾನು ಫ್ರೀ ಇರದ ಕಾರಣ ನಂತರ ಮಾತನಾಡುವೆ ಎಂದು ಹೇಳಿದೆ. ಮಕ್ಕಳು ಬರುವ ಸಮಯ ಮಕ್ಕಳಿಗೆ ಪರೀಕ್ಷೆ ಆದ್ದರಿಂದ ಈಗ ಆಗುವುದಿಲ್ಲ ಎಂದಾಗ ಇಲ್ಲ ಮಕ್ಕಳ ವಿಷಯವೇ ಅಂದ ನಾನು ಉತ್ತರ ನೀಡಲಿಲ್ಲ ನೀವು ಯಾವ ಊರು ಎಂದರೆ ನಾನು ಬೆಂಗಳೂರಿನಲ್ಲಿ ಇರುವುದು ಎಂದೇ ನಮ್ಮ ಹೊಸಪೇಟೆಯ ಕಾಲೇಜು ಚೆನ್ನಾಗಿದೆ ಒಮ್ಮೆ ಭೇಟಿ ನೀಡಿ ಎಂದ ನಾನು ಹೇಳಿದೆ ಆ ಊರಿನ ಜನರಿಗೆ ಹೇಳಿ ಗೊತ್ತಿರುವವರಗೆ ನಾನು ಹೇಳುತ್ತೇನೆ ಎಂದೇ. ಸಂಪರ್ಕಿಸುವಾಗ ನಿಮ್ಮೂರಿನ ಹತ್ತಿರದಲ್ಲಿರುವವರನ್ನು ಸಂಪರ್ಕಿಸಿ ಎಂದಾಗ ನಿಮ್ಮಿಷ್ಟ ಎಂದ ಆತನ ಮಾತಿಗೆ ಸ್ವಲ್ಪ ರೇಗಿತು. ಪಿಯುಸಿಗೆ ಯಾರೂ ಕೂಡ ತಮ್ಮ ಮಕ್ಕಳನ್ನು ಬೇರೆ ಊರಿಗೆ ಕಳುಹಿಸುವುದಿಲ್ಲ ತಮ್ಮ ಮನೆಯ ಹತ್ತಿರವೇ ಓದಿಸುತ್ತಾರೆ ಎಂದೆ. ಅದಕ್ಕೆ ಕಳೆದ ವರ್ಷ ನಮ್ಮ ಕಾಲೇಜಿನಲ್ಲಿ ಬೆಂಗಳೂರಿನ ಹುಡುಗ ಓದಿದ್ದಾನೆ ಎಂದು ಹೇಳಿದ
ಈ ಘಟನೆಯ ಕುರಿತು ಬರೆಯ ಬೇಕು ಏನಿಸಿತು. ನನ್ನ ಮಗ ಎಸ್ ಎಸ್ ಎಲ್ ಸಿ ಎಂದು ತಿಳಿದ ಕೂಡಲೇ ಬೆಂಗಳೂರಿನ ಹಲವು ಕಾಲೇಜುಗಳಿಂದ ಕರೆ ಹಾಗೂ ಸಂದೇಶಗಳು ಬಂದಿವೆ ಅವುಗಳು ನನ್ನ ಮನಸ್ಸಿಗೆ ಯಾವ ರೀತಿಯಲ್ಲಿಯೂ ತಪ್ಪು ಎನಿಸುವ ಭಾವನೆ ಮೂಡಿರಲಿಲ್ಲ ಆದರೆ ಇಂದಿನ ಈ ಘಟನೆ ಜನರ ವಿಚಾರ ಎಲ್ಲಿ ಹೊರಟಿದೆ ಎಂಬ ಪ್ರಶ್ನೆಯನ್ನು ಮೂಡಿಸಿತು.
ನಮ್ಮ ವಸ್ತು, ಪ್ರತಿಭೆ, ಗುಣ ಅಥವಾ ನಮ್ಮ ಸೇವೆಯ ಪ್ರಚಾರ ಪ್ರಸಾರ ಮಡುವುದು ನಮ್ಮ ಹಕ್ಕೇ ಆದರೆ ಅದರ ಇತಿ ಮಿತಿ ನಮ್ಮ ಭೌಗೋಳಿಕ ವ್ಯಾಪ್ತಿಯೊಳಗೆ ಇದ್ದರೆ ಉತ್ತಮ. ಜನರ ಕಾಮನ್ ಸೆನ್ಸ್ ಅಂದರೆ ಸಾಮಾನ್ಯ ಜ್ಞಾನಕ್ಕೆ ಬೂದಿ ಕವಿದಿದೆಯೋ ಅಥವಾ ವಿವೇಚನಾ ಶಕ್ತಿಯು ಮುಗಿದಿದೆಯೋ ತಿಳಿಯಲಿಲ್ಲ. ಮಕ್ಕಳನ್ನು 11-12 ವರ್ಷಕ್ಕೆ ಹೊರಗೆ ಕಳುಹಿಸಲು ನಮ್ಮಿಂದ ದೂರ ಊರಿನಲ್ಲಿ ಇಡಲು ನಾವು ಹಳ್ಳಿಯಲ್ಲಿ ಅಥವಾ ಅನುಕೂಲತೆ ಇರದೇ ಇರುವ ಪ್ರದೇಶದಲ್ಲಿದ್ದರೆ ಮಾತ್ರ ಅದರಲ್ಲೂ ಹೆಸರಾಂತ ಅಥವಾ ಒಂದು ಉದ್ದೇಶಕ್ಕಾಗಿ ಹೊರಗೆ ಕಳುಹಿಸುವುದು ನಮ್ಮ ಭಾರತೀಯರ ಅಭ್ಯಾಸ. ಪಾಶ್ಚಾತ್ಯರಂತೆ ಮಕ್ಕಳು ಹದಿಹರೆಯಕ್ಕೆ ಬಂದ ಕೂಡಲೇ ಮನೆಯಿಂದ ಹೊರಗೆ ಕಳಿಸಿ ನಿಮ್ಮದು ನೀವೇ ದುಡಿದು ತಿನ್ನಿ ಎಂದು ಕೂಡ ನಾವು ಹೇಳುವುದಿಲ್ಲ. ಬೇರೆ ಊರಿನಲ್ಲಿ ಇಟ್ಟು ಅವರ ಹಾಸ್ಟೆಲ್ ಖರ್ಚು ಊಟದ ಖರ್ಚು ಮಾಡಿಸಿ ಕಳಿಸುವ ಅವಶ್ಯಕತೆ ಇರುತ್ತದೆಯೇ?
ಬೆಂಗಳೂರಿನಂತಹ ರಾಜಧಾನಿಯಲ್ಲಿ ಬದುಕುತ್ತಿರುವವರು ವಿದ್ಯಾಭ್ಯಾಸಕ್ಕೆ ಬೇರೆ ಊರಿಗೆ ಕಳುಹಿಸುವ ಪ್ರಮೇಯ ಏಕೆ ಬರುತ್ತದೆ? ಬಂದರೂ ಕೂಡ ವಿಶೇಷವಾದ ಶಿಕ್ಷಣ ನಮ್ಮಲ್ಲಿ ಸಿಗದೇ ಇದ್ದಾಗ ಬೇರೆ ಊರಿಗೆ ಕಳುಹಿಸಿ ಕಲಿಸುವ ಪ್ರಸಂಗ ಬರುತ್ತದೆ. ಆ ವ್ಯಕ್ತಿಯ ಮೇಸಜ್ ನನಗೆ ಇರಿಸುಮುರಿಸು ಉಂಟು ಮಾಡಿತು.
ಇತ್ತೀಚಿಗೆ ವಿದ್ಯಾಭ್ಯಾಸ ಅವರಿಗೆ ಕೊಡಿಸುವ ತರಬೇತಿ ವ್ಯಾಪಾರೀಕರಣ ಹೆಚ್ಚು ಸೌಕರ್ಯಗಳನ್ನು ಕೊಡುವವರ ಬಳಿ ಮಕ್ಕಳನ್ನು ಬೇರೆ ಊರಿಗೆ ಕಳುಹಿಸುವುದು ಸಾಮಾನ್ಯವೇ ಆದರೂ ಕೂಡ ಶ್ರೀಮಂತರು ಇದ್ದರೇ ಅದೇ ಊರಿನಲ್ಲಿ ಮಧ್ಯಮ ವರ್ಗದ ಜನರು ಕೂಡ ತಮ್ಮ ಮನೆಯ ಹತ್ತಿರದಲ್ಲಿ ಕೋಚಿಂಗ್ ಕಳುಹಿಸುತ್ತಾರೆ. ಹಳ್ಳಿಯವರಿಗೆ ಬೇರೆ ಅವಕಾಶ ಇಲ್ಲದ ಊರಿನ ಜನರಿಗೆ ಹೇಳಿದರೆ ಒಂದು ತರ್ಕ ಬದ್ಧ ವಿಚಾರ
ಪೋಷಕರೇ ಇಂತಹ ಜನರಿಂದ ಸಾವಧಾನರಾಗಿರಿ. ಮಕ್ಕಳನ್ನು ಅವರ ಬೆಳವಣಿಗಗೆಗೆ ಎಂದು ಬೇರೆ ಊರಿಗೆ ಕಳುಹಿಸಿದರೆ ತಪ್ಪಿಲ್ಲ ಆದರೆ ಅವಶ್ಯಕತೆ ಇದೆಯೇ? ನಮ್ಮೂರಿನಲ್ಲಿ ಸೌಲಭ್ಯಗಳು ಇಲ್ಲವೇ? ಬೇರೆ ಜನರ ಉದ್ಧಾರಕ್ಕಾಗಿ ನಾವು ಯಾರ ಮಾತನ್ನು ಕೇಳಬೇಕಿಲ್ಲ.
ನಮ್ಮ ಮಕ್ಕಳ ಒಳಿತು ಕೊಡಕು ಅವರ ಭವಿಷ್ಯ ಚಿಂತೆ ನಮಗಲ್ಲದೇ ಬೇರೆಯವರಿಗೆ ಬರುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪ್ರಸಾರ ಬಯಸುವವರು ಒಮ್ಮೊಮ್ಮೆ ಮತ್ತೊಬ್ಬರ ಮನಸ್ಸಿಗೆ ಕಿರಿ ಕಿರಿ ಅಥವಾ ತಲೆ ಬೇನೆಗೆ ಕಾರಣವಾಗುತ್ತಾರೆ. ಹಿಂದೆಯೂ ಒಂದೆರಡು ಬಾರಿ ಇಂತಹ ಘಟನೆ ನಡೆದಿವೆ ಆದರೆ ಈ ಬಾರಿ ಭೌಗೋಳಿಕ ಮೀತಿಯನ್ನು ದಾಟಿ ಯಾವುದೋ ಊರಿಗೆ ಪಿಯುಸಿ ಕಲಿಸಲು ಕಳುಹಿಸಬಹುದೆಂಬ ಮಾತನ್ನು ಕೇಳಿ ಬರೆಯಬೇಕು ಎನಿಸಿ ಬರೆಯುತ್ತಿದ್ದೇನೆ.
ನಮ್ಮ ಮಕ್ಕಳು ನಮ್ಮ ಮುಂದೆ ಇದ್ದು ಓದುವುದು ಅವರಿಗೂ ಯೋಗ್ಯ ನಮಗೂ ಸಮಾಧಾನ. ಇಂಜಿನಿಯರಿಂಗ್ ಮೆಡಿಕಲ್ ಮಾಡುವ ಸಂದರ್ಭದಲ್ಲಿ ನಮ್ಮೂರಿನಲ್ಲಿಯೇ ಸೀಟ್ ಸಿಗದೇ ಹೋದಾಗ ಕಳುಹಿಸಲೇ ಬೇಕು ಹೀಗಾಗಿ ಪಿಯುಸಿ ಅಥವಾ ಪ್ರೌಢಶಾಲೆಯಲ್ಲಿ ಓದುವ ಮಕ್ಕಳನ್ನು ನಮ್ಮಿಂದ ದೂರ ಮಾಡಿಕೊಳ್ಳಬಾರದು. ಮಕ್ಕಳು ತಂದೆ ತಾಯಿಯ ಜೊತೆಗೆ ಅವರ ಸಮಯ ಕಳೆಯುವುದು ಅವರು ಓದು ಮುಗಿಸಿ ಕೆಲಸಕ್ಕೆ ಸೇರುವವರೆಗೆ ಮತ್ರ ನಂತರ ಕೆಲಸ ಅವರ ಅಭಿವೃದ್ಧಿ ಎಂದು ಬೇರೆ ಊರು ದೇಶಗಳಿಗೆ ಹೋಗುತ್ತಿರುವ ಸಂದರ್ಭದಲ್ಲಿ ಅದರಲ್ಲೂ ಹದಿ ಹರೆಯದ ಸಮಯದಲ್ಲಿ ಮಕ್ಕಳನ್ನು ನಮ್ಮಿಂದ ದೂರ ಮಾಡಿಕೊಂಡು ಮಕ್ಕಳಿಂದ ದೂರ ಆಗುವುದನ್ನು ತಪ್ಪಿಸಿ.
ಪ್ರಚಾರ ಪ್ರಸಾರಕ್ಕೆ ತಮ್ಮ ಹಿರಿಮೆಯನ್ನು ಹೇಳಿ ಕೊಳ್ಳುವ ಸಂಘ ಸಂಸ್ಥೇ ವ್ಯಕ್ತಿಗಳು ಬೇಕಾದಷ್ಟು ಇದ್ದರೂ ನಮ್ಮ ವಿವೇಕ ಮತ್ತು ತರ್ಕಬದ್ಧ ನಡುವಳಿಕೆಯಿಂದ ನಡೆದು ಕೊಳ್ಳುವುದು ಉತ್ತಮ
ಮಾಧುರಿ ದೇಶಪಾಂಡೆ