ಸುಮಶ್ರೀನಿವಾಸ್ ಕವಿತೆ-ಘನಮೌನಿ ಅವನು

ಅವನ ಬಳಿ
ನನಗಾಗಿ ಕ್ಷಣಗಳೆ
ಇರಲಿಲ್ಲ ನಾ
ಜನುಮವಿಡಿ
ಜೊತೆಬಯಸಿದ್ದೆ.

    ಅವನ ಬಳಿ
    ನನಗಾಗಿ ನುಡಿಗಳೆ
    ಇರಲಿಲ್ಲ ನಾ
    ಅಸಂಖ್ಯಾತ ಮಾತ 
    ಸಾಕ್ಷಿ ಬಯಸಿದ್ದೆ.

ಅವನ ಬಳಿ
ನನಗಾಗಿ ನಗುವೆ
ಇರಲಿಲ್ಲ ನಾ
ನಗೆಯಲೆಯಲಿ
ತೇಲಬಯಸಿದ್ದೆ.

      ಅವನ ಬಳಿ
      ನನಗಾಗಿ ಪ್ರೀತಿಯೆ
      ಇರಲಿಲ್ಲ ನಾ
      ಒಲವಿನಲಿ
      ಮೀಯಬಯಸಿದ್ದೆ.

ಅವನ ಬಳಿ
ನನಗಾಗಿ ಮಿಡಿತವೆ
ಇರಲಿಲ್ಲ ನಾ
ಅನವರತ
ನೆನಪ ತುಡಿತ ಬಯಸಿದ್ದೆ .

2 thoughts on “ಸುಮಶ್ರೀನಿವಾಸ್ ಕವಿತೆ-ಘನಮೌನಿ ಅವನು

Leave a Reply

Back To Top