ಶಂಕರಾನಂದ ಹೆಬ್ಬಾಳ ಗಜಲ್

ಅರಳಿದ ಮನಸಿಗೆ ಪ್ರಿಯಕರನ ನೋಡುವಾಸೆ
ಪ್ರೀತಿಯ ನುಡಿಯಲಿ ತನುವನು ಕೂಡುವಾಸೆ

ಎದೆಯ ಆಳದಲಿ ಭಾವೋನ್ಮಾದ ಉಕ್ಕಿತೇ
ಒಲವ ಹಾದಿಯಲಿ ಜೊತೆಯ ಬೇಡುವಾಸೆ

ಕನಸಿನ ಲೋಕದಲಿ ತೇಲುತಿರುವೆ ನಾನು
ಹೃದಯಕೆ ಮನ್ಮಥನ ಹೂಬಾಣ ಬಿಡುವಾಸೆ

ಅರ್ಥವಿತ್ತೆಯಲ್ಲ ಬಾಳಿನ ಬಂಧುರದ ಬಂಧಕೆ
ಮೋಹಕ ನೋಟದಲಿ ಗಾನವ ಹಾಡುವಾಸೆ

ಏಳೇಳು ಜನುಮದಲಿ ಒಡೆಯದಂತ ಸಂಬಂಧ
ಪ್ರತಿರಾತ್ರಿಯೂ ಸ್ವಪ್ನದಲಿ ನಿನ್ನನ್ನು ಕಾಡುವಾಸೆ


Leave a Reply

Back To Top