” ಬೆಲ್ಲದ ನೀರೆರೆದಡೇನು, ಬೇವು ಸಿಹಿಯಪ್ಪುದೆ?

ಕತ್ತುರಿಯ ಲೇಪನವಿತ್ತಡೇನು, ನೀರುಳ್ಳಿಯ ದುರ್ಗಂಧ ದೂರುಪ್ಪುದೆ?

ಕಸುಗಾಯ ಹಿಸುಕಿದಡೇನು, ಹಣ್ಣಿಗೆ ಹವಣಪ್ಪುದೆ?

ಕಿರಿಯ ಮನದ ಮಾನವನಿಗೆ ಬಹಿರಂಗದ ಬರಿಯ ಸಂಸ್ಕಾರವಾದಡೇನು?

ಭವಿಯಾಗಿಪ್ಪನಲ್ಲದೆ ಭಕ್ತನಪ್ಪನೆ ಕೂಡಲ ಚನ್ನಸಂಗಮದೇವಾ,
ಪೂರ್ವಗುಣವಳಿದು ಪುನರ್ಜಾತನಾಗದನ್ನಕ್ಕ?”

ಚಿನ್ಮಯ ಜ್ಞಾನಿ ಚೆನ್ನಬಸವಣ್ಣ

ವಿಶ್ವಗುರು ಅಪ್ಪ ಬಸವಣ್ಣನವರ ನೇತೃತ್ವದಲ್ಲಿ ಉದಯಿಸಿದ ಕಲ್ಯಾಣ ಕ್ರಾಂತಿಯು ಜಗತ್ತಿನ ಇತಿಹಾಸದಲ್ಲೇ ತಾತ್ವಿಕ ಸ್ವರೂಪದ ಸತ್ಯ ಸಂಶೋಧನೆಯ ಕೇಂದ್ರವಾಗಿತ್ತು ಎಂಬುದು,
ಶರಣರ ವಚನಗಳನ್ನು ಅವಲೋಕಿಸಿದಾಗ, ಅರ್ಥೈಸಿಕೊಂಡಾಗ ಮನದಟ್ಟಾಗುತ್ತದೆ.

ಇಂದಿನ ಮುಂದುವರಿದ ವೈಜ್ಞಾನಿಕ ಸಂಶೋಧನೆಗಳಿಗೆ ಮರು ವಿಮರ್ಶೆಗೆ ಹಲವು ಅವಕಾಶಗಳು ಇವೆ.
 ಆದರೆ ಶರಣರು ರಚಿಸಿರುವ ವೈಚಾರಿಕ ನಿಲುವಿಗೆ ಯಾವುದೇ ಮರು ವಿಮರ್ಶೆ ತರ್ಕ, ವಿತರ್ಕ ಸೊಂಕಲಾರವು. ಅಷ್ಟೊಂದು ತಾತ್ವಿಕ ನೆಲೆಯಲ್ಲಿ ಶರಣರು ವಚನಗಳನ್ನು ರಚಿಸಿದ್ದು ನೋಡಿದರೆ ಅವರೆಂಥಾ ತತ್ವ ಬೋಧಕರಾಗಿದ್ದಾರು, ಮತ್ತು ತತ್ವ ಪರಿಪಾಲಕರಾಗಿದ್ದರು ಎಂಬುದು ಗೊತ್ತಾಗುತ್ತದೆ.

ಚರಾಚರ ಸೃಷ್ಟಿಯ ಮೂಲ ನಿಯಮಗಳಿಗೆ ಭದ್ಧರಾದ ಶರಣರು

ಬೆಲ್ಲದ ನೀರೆರೆದಡೇನು,
ಬೇವು ಸಿಹಿಯಪ್ಪುದೆ?

ಸೃಷ್ಟಿಯ ಮೂಲ ಸತ್ಯಗಳನ್ನು ಯಾವುದೇ….. ಕಾರಣಕ್ಕೆ ಯಾರಿಂದಲೂ ಬದಲಿಸಲು ಸಾಧ್ಯವೇ? ಇಲ್ಲ , ಬೇವಿಗೆ ಬೆಲ್ಲದ ನೀರು ಸುರಿದರೆ ಅದು ಎಂದಾದರೂ ಸಿಹಿ ಆಗುವುದೇ
ಎಂಬ ಶರಣರ ಸವಾಲಿಗೆ ಯಾರಾದರೂ ಉತ್ತರಿಸಬಹುದೇ?
ಇಲ್ಲ, ಅದು ಸಾಧ್ಯವೇ ಇಲ್ಲ.
ಇದುವೇ…. ಶರಣರ ಶಕ್ತಿ.

ಕತ್ತುರಿಯ ಲೇಪನವಿತ್ತಡೇನು,
ನೀರುಳ್ಳಿಯ ದುರ್ಗಂಧ
ದೂರುಪ್ಪುದೆ?

ಇನ್ನೊಂದು ತಾತ್ವಿಕ ಮೂಲ ಸತ್ಯದ ಉಧಾರಣೆ ಕೊಟ್ಟಿದ್ದಾರೆ, ಈರುಳ್ಳಿಗೆ ಕಸ್ತೂರಿಯ ಲೇಪನ ಹಚ್ಚಿದರೆ ಅದರ ಮೂಲ ವಾಸನೆ ದೂರ ಹೋಗಲು ಸಾಧ್ಯವೇ? ಅದು ಎಂದಿಗೂ ಆಗದ ಮಾತಾಗಿದೆ.
ಸೃಷ್ಟಿಯಲ್ಲಿಯ ಇಂತಹ ಸಾಮಾನ್ಯ ಉದಾರಣೆಗಳ ಮೂಲಕ ಸೃಷ್ಟಿಯ ಮೂಲತತ್ವಕ್ಕೆ ಮಾನವನ ಜೀವನ ಬದ್ಧವಾಗಿ ಇರಬೇಕೆಂಬುದು ಶರಣರ ಆಶಯವಾಗಿದೆ.

ಕಸುಗಾಯ ಹಿಸುಕಿದಡೇನು, ಹಣ್ಣಿಗೆ ಹವಣಪ್ಪುದೆ?

ಹಸಿ ಕಾಯಿಯನ್ನು ಒತ್ತಿ ಹಿಚಕಿ ಹಣ್ಣು ಮಾಡಲು ಸಾಧ್ಯವಿಲ್ಲ
ಸೃಷ್ಟಿಯ ನಿಯಮದಂತೆ ಕಾಯಿ ಹಣ್ಣಾಗುವುದು ಹೊರತು…. ಮನುಷ್ಯನ ಆಸೆ ತ್ರಸೆಗಳಿಗೆ ಸೃಷ್ಟಿ ಬದಲಾಗದು. ಈ ಮೂಲ ಸತ್ಯವನ್ನು ಶರಣರು ಬಲವಾಗಿ ತಿಳಿಯಪಡಿಸಿದ್ದಾರೆ.

ಕಿರಿಯ ಮನದ ಮಾನವನಿಗೆ ಬಹಿರಂಗದ ಬರಿಯ ಸಂಸ್ಕಾರವಾದಡೇನು?

ಹಾಗೆಯೇ ಸಂಕುಚಿತ ಬುದ್ಧಿಯವರಿಗೆ ಕೇವಲ ಬಾಹ್ಯದ ಸಂಸ್ಕಾರ ಕೊಟ್ಟರೆ ಅವರ ಅಂತರಂಗ ಸಂಸ್ಕಾರ ಹೊಂದಿ ಶುದ್ಧವಾಗಲಾರರು, ಅಷ್ಟೇ ಅಲ್ಲ ಅವರು ತಮ್ಮ ಕುಬುದ್ಧಿಯಿಂದ ಹೊರ ಬರಲಾರರು.

ಭವಿಯಾಗಿಪ್ಪನಲ್ಲದೆ ಭಕ್ತನಪ್ಪನೆ ಕೂಡಲ ಚನ್ನಸಂಗಮದೇವಾ,
ಪೂರ್ವಗುಣವಳಿದು ಪುನರ್ಜಾತನಾಗದನ್ನಕ್ಕ?

ಅಷ್ಟೇ ಅಲ್ಲ,ಶರಣ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರು ಹೇಳುತ್ತಾರೆ.
ಇಂತಹ ಕುಬುದ್ಧಿಯ ಜನರು ತಮ್ಮ ಭವಿತನದಿಂದಲೂ ಹೊರಗೆಂದು ಬರಲಾರರು, ಮನುಷ್ಯ ತನ್ನ ಪೂರ್ವ ಗುಣಗಳಿಂದ ಸಂಪೂರ್ಣ ಮುಕ್ತನಾಗಬೇಕಾದರೆ,
ಶರಣತ್ವದ ಗುಣಗಳನ್ನು ಪಡೆದು ಹೊಸ ಮಾನವನಾಗಿ ಬದಲಾವಣೆಯಾದರೆ ಮಾತ್ರ
ಪೂರ್ವ ಗುಣಗಳಿಂದ ಸಂಪೂರ್ಣ ಮುಕ್ತನಾಗಿ, ಭಕ್ತನಾಗಿ ಹೊರಹೊಮ್ಮಲು ಸಾಧ್ಯ ಎಂಬ ಖಚಿತ ಅಭಿಪ್ರಾಯವನ್ನು ಶರಣ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರು ಸ್ಪಷ್ಟ ಪಡಿಸಿದ್ದಾರೆ.
(ಇದುವೇ ಶರಣರ ದ್ರಷ್ಟಿಯಲ್ಲಿ ಪುನರ್ಜನ್ಮ ಪರಿಕಲ್ಪನೆ.ಇದು ನನ್ನ ಸ್ವಅಭಿಪ್ರಾಯ. )


One thought on “

  1. Om Shri Guru Basava Lingayanamaha Sharanusharanarthigalu
    Tumbu Hrudayada Dhanyavadagalu mattu Hardik Hardik Subhashayagalu . RBD Miraj

Leave a Reply

Back To Top