ಬಾಗೇಪಲ್ಲಿಯವರ ಗಜಲ್

ಕಾವ್ಯಸಂಗಾತಿ

ಬಾಗೇಪಲ್ಲಿ

ಗಜಲ್

(ರಧೀಫ್ ಸಹಿತ ಜುಲ್ಕಾಫಿಯಾ ಗಜಲ್ )

ಎಲ್ಲ ಲೋಕಗಳನು ಗೆಲ್ಲುವೆ
ಹೇಳಿದೊಡೆ ನೀ
ಸಪ್ತಸಾಗರಗಳನು ದಾಟುವೆ ಕೋರಿದೊಡೆ ನೀ

ನಭದ ನಕ್ಷತ್ರಗಳ ತಲೆಗೆ ಮುಡಿಯ
ಬೇಕೆ ಪ್ರಿಯೆ
ಸ್ವರ್ಗದಿ ಇದ್ದರೂ ಹೆಕ್ಕಿ ಹಾರುವೆ ಕೇಳಿದೊಡೆ ನೀ

ಭೂಗರ್ಭದಿಹ ವಜ್ರಗಳನು ಹೊಂದಲು ಆಸೆಯುಂಟೆ
ಪಾತಾಳ ಭೈರವಿ ಜೊತೆ ತೂರುವೆ ಬೇಡಿದೊಡೆ ನೀ

ಮುಕ್ಕಣ್ಣನ ಶಿರದ ವಕ್ರ ಚಂದ್ರಮ ನಿನಗೆ ಇಷ್ಟವೇನು
ತಾಯಿಗಂಗಾ ಜಲಪಾತದಿ ಜಾರುವೆ ಆಶಿಸಿದೊಡೆ ನೀ

ಕೃಷ್ಣಾ! ಹೆಣ್ಣ ಬಯಕೆಯ ಈಡೇರಿಸುವುದೆ ಗಂಡು ತನ
ಭೀಷ್ಮ ಪ್ರತಿಜ್ಞೆಯನು ನಾ ಮೆಟ್ಟುವೆ ಬಯಸಿದೊಡೆ ನೀ


ಬಾಗೇಪಲ್ಲಿ

One thought on “ಬಾಗೇಪಲ್ಲಿಯವರ ಗಜಲ್

Leave a Reply

Back To Top