ಡಾ. ನಿರ್ಮಲಾ ಬಟ್ಟಲ ಕವಿತೆ ಪುನರ್ಜನ್ಮ

ಕಾವ್ಯ ಸಂಗಾತಿ

ಡಾ. ನಿರ್ಮಲಾ ಬಟ್ಟಲ

ಪುನರ್ಜನ್ಮ

ಕತ್ತಲೆಯ ಕೂಪದಿಂದ
ಬದುಕಿನೆಡೆಗೆ
ಪುನರ್ಜನ್ಮ

ಉಸಿರು ಬಿಗಿ ಹಿಡಿದು
ಸಾವು ಗೆದ್ದವರ
ಬೆಳಕು ಗಾಳಿಯ
ಸಂಭ್ರಮ

ಹದಿನೇಳು ದಿನಗಳ
ನಾಲ್ಕು ನೂರು ಎಂಟು
ಗಂಟೆಯ ಪ್ರಯತ್ನಕ್ಕೆ
ದೇವನೊಲುಮೆ

ಇಂದೇ ಸಂಭ್ರಮದ
ದೀಪಾವಳಿ
ಮಾನವನೆದೆಯ
ಪ್ರೀತಿಯ ಹರಕೆಗೆ

ಇದುವೇ ನಿಜವಾದ
ವಿಶ್ವ ಗೆಲುವು
ಸವಾಲುಗಳು ಸೋಲಿಸಿ
ಜೀವ ಉಳಿಸುವ ಆಟದಲಿ


ಡಾ. ನಿರ್ಮಲಾ ಬಟ್ಟಲ

2 thoughts on “ಡಾ. ನಿರ್ಮಲಾ ಬಟ್ಟಲ ಕವಿತೆ ಪುನರ್ಜನ್ಮ

  1. ಅನಾಹುತಕೆ ಬಿದ್ದು ಅನಾಹುತವ ನುಂಗಿ ಬೆಂದು ಗೆದ್ದು ಮೇಲೆದ್ದು ಬಂದವರ ಸಾಧನೆಯ ನೆನದು ಕವನದ ಮುಖಾಂತರ ಅಭಿನಂದನೆಯ ಸಲ್ಲಿಸಿದ ಕವಿತೆ ಅದ್ಭುತವಾಗಿದೆ ಮೇಡಂ

Leave a Reply

Back To Top