ಪ್ರಭಾ ಅಶೋಕ ಪಾಟೀಲ ಕವಿತೆ-ಶಾಂತವಾಗು ಮನವೇ

ಕಾವ್ಯಸಂಗಾತಿ

ಪ್ರಭಾ ಅಶೋಕ ಪಾಟೀಲ

ಶಾಂತವಾಗು ಮನವೇ

ಆಸೆಗಳೆಂಬ ಬಂಡಿಯೇರಿ
ಮೋಹ ಎಂಬ ಬಲೆಗೆ ಸಿಲುಕಿ
ನಾಶವಾಗುವೆ ಏಕೆ
ಶಾಂತವಾಗು ಮನವೇ

ಕ್ಷಣಿಕ ಸುಖದ ಹಿಂದೆ ಸಾಗಿ
ಭೋಗದಾಸೆಯ ಬೆನ್ನೇರಿ
ಬಳಲಿ ಬೆಂಡಾಗುವೆ ಏಕೆ
ಶಾಂತವಾಗು ಮನವೇ

ನಾನೆಂಬ ಅಹಂಕಾರದಲಿ
ಗೋಡೆಯ ಕಟ್ಟಿಕೊಂಡು
ಸ್ವಾರ್ಥದೇ ಬದುಕುವೆ ಏಕೆ
ಶಾಂತವಾಗು ಮನವೇ

ಬಂಧು ಬಾಂಧವರೆಂಬ
ಬಿಸಿಲು ಕುದುರೆಗೆ ಮರುಳಾಗಿ
ಸೊರಗಿ ನಲುಗುವೆ ಏಕೆ
ಶಾಂತವಾಗು ಮನವೇ

ಕೋಪ ತಾಪ ಬಿಟ್ಟುಬಿಡು
ನಿತ್ಯ ನಿರಂಜನನ ನೆನೆಯುತಿರು
ಭಾವನೆಯ ಮೇಲೆ ಹಿಡಿತವಿಡು
ಶಾಂತವಾಗು ಮನವೇ

ಹೊಗಳಿಕೆಗೆ ಹಿಗ್ಗದಿರು
ತೆಗಳಿಕೆಗೆ ಕುಗ್ಗದಿರು
ನಿನ್ನಂತರಂಗದ ಭಾವ ಅರಿಯೇಕೆ
ಶಾಂತವಾಗು ಮನವೇ

ಹುಟ್ಟಿದಾಗ ಏನು ತರಲಿಲ್ಲ
ಹೋಗುವಾಗ ಬರಿಗೈದಾಸ ನೀನು
ಮತ್ತೇಕೆ ಈ ಬಡಿದಾಟವು
ಶಾಂತವಾಗು ಮನವೇ


ಪ್ರಭಾ ಅಶೋಕ ಪಾಟೀಲ

2 thoughts on “ಪ್ರಭಾ ಅಶೋಕ ಪಾಟೀಲ ಕವಿತೆ-ಶಾಂತವಾಗು ಮನವೇ

  1. ಪ್ರಭ ಅವರೇ, ಕವನ ತುಂಬಾ ಸರಳವಾಗಿ ಅರ್ಥಗರ್ಭಿತವಾಗಿ ಚೆನ್ನಾಗಿ ಮೂಡಿ ಬಂದಿದೆ

Leave a Reply

Back To Top