ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
“ಇರುಳು ಕಳೆದು ಹಗಲು ಮೂಡಲಿ”
ಬದುಕಲ್ಲಿ ಆತಂಕ ಹತಾಶೆ ತುಂಬಿದೆ
ಕನಸು ಮುರಿದು ನಿರಾಸೆ ಮೂಡಿದೆ
ಅಸೂಯೆ ಅವಮಾನ ಸಹಿಸಲಾಗದೆ
ನೆಮ್ಮದಿಗಾಗಿ ಮನ ಹುಡುಕಾಡಿದೆ
ಒತ್ತಡದ ಬದುಕಲ್ಲಿ ಆಯಾಸವಿದೆ
ನಿತ್ಯ ಚಿಂತೆಯಲ್ಲಿ ಬೆಂದು ಬಳಲಿದೆ
ಸೂರಿದ್ದರೂ ಸೋರುತಿದೆ ಮಾಳಿಗೆ
ದೇವರ ಮೊರೆ ಹೋದೆ ಮನಶ್ಯಾಂತಿಗೆ
ಚಳಿ ಮಳೆ ಬಿರುಗಾಳಿ ಬೀಸಿದರೂ
ದುಃಖ ದುಮ್ಮಾನಗಳು ಏನೇ ಇದ್ದರೂ
ಸಹಿಸುತ ನಿಂತೆನು ಅಲುಗಾಡದಂತೆ
ಗಟ್ಟಿಮುಟ್ಟಾದ ಮರದ ಬೇರಿನಂತೆ
ಭಗವಂತ ಸ್ಪಂದಿಸಿ ದಯೆ ತೋರಲಿ
ಇರುಳು ಕಳೆದು ಹಗಲು ಮೂಡಲಿ
ಕತ್ತಲೆಯ ಬಾಳಲ್ಲಿ ಬೆಳಕು ಹರಿಯಲಿ
ಸುಂದರ ನೆಮ್ಮದಿಯ ಬದುಕಾಗಲಿ
ಸಿಹಿ ಕಹಿ ಘಟನೆಗಳ ಅನುಭವಿಸಿ
ಸೋಲು ಗೆಲುವುಗಳನು ಸ್ವೀಕರಿಸಿ
ಜೀವನದ ಜೋಕಾಲಿಯ ತೂಗಿಸಿ
ನಲಿಯಬೇಕು ಕಷ್ಟಗಳನು ಕರಗಿಸಿ
ಜಯಶ್ರೀ ಎಸ್ ಪಾಟೀಲ
Super mom
Excellent poem