ದೇವಿದಾಸ ನಾಯಕ ಕವಿತೆ-ಕನ್ನಡಾಂಬೆಗೆ ನಮನ

ಕಾವ್ಯ ಸಂಗಾತಿ

ದೇವಿದಾಸ ನಾಯಕ

ಕನ್ನಡಾಂಬೆಗೆ ನಮನ

ಕನ್ನಡಾಂಬೆ ನಿನಗೆ ನನ್ನ ನಮನ
ನಾಡಿಗಾಗಿ ಮುಡಿಪು ಎನ್ನ ಜೀವನ
ರಕ್ಷಿಸಬೇಕು ತಾಯಿ ಈ ಪ್ರಕೃತಿ
ಬಿಡಲೇಬೇಕು ಮಾನವ ವಿಕೃತಿ

ಏನಿಲ್ಲ ಹೇಳಮ್ಮ ಈ ನಾಡಿನಲಿ
ಹೇಗಮ್ಮ ಕನ್ನಡ ನಾ ಮರೆಯಲಿ?
ಸಾಹಿತ್ಯವ ತುಂಬಿರುವ ಈ ನಾಡು
ವಿಶೇಷ ತಾಣಗಳ ನೆಲೆವೀಡು

ವೀರಧೀರೆಯರ ನೆನೆಯಲೇಬೇಕು
ಮಾಡಿದ ಕಾರ್ಯವ ಸ್ಮರಿಸಲೇಬೇಕು
ಕನ್ನಡವ ಮರೆತರೆ ಬದುಕೇ ಇಲ್ಲ
ಮರೆತು ನಡೆದರೆ ಆತ ಮನುಷ್ಯನೆ ಅಲ್ಲ

ಬರಹದಲಿ ಕವಿಗಳು ಮುಂದಿಹರು
ಕಲೆಯೊಳಗೆ ಹಿಂದಿಲ್ಲ ಕಲಾವಿದರು
ಸ್ವರ್ಗವೇ ಆಗಿಹುದು ಕರುನಾಡು
ತಟ್ಟದಿರಲಿ ನುಡಿಗೆ ಎಂದೂ ಕೇಡು

ಸರಳ ಸುಂದರ ನಮ್ಮೀ ಭಾಷೆ
ನಮ್ಮಲ್ಲಿರಲಿ ಸದಾ ಓದುವ ಆಸೆ
ನಾಡು ನುಡಿ ಸಂಸ್ಕೃತಿ ನಮ್ಮ ರಕ್ಷಣೆ
ಅನ್ಯಾಯವಾದರೆ ನಾವೇ ಹೊಣೆ


ದೇವಿದಾಸ ನಾಯಕ

2 thoughts on “ದೇವಿದಾಸ ನಾಯಕ ಕವಿತೆ-ಕನ್ನಡಾಂಬೆಗೆ ನಮನ

  1. ಕನ್ನಡವೇ ಸತ್ಯ ಕನ್ನಡವೇ ನಿತ್ಯ…. ಕನ್ನಡ ಭಾಷೆಯ ಸಮ್ಮಿಳಿತ ಕನ್ನಡಿಗನ ಹೃದಯ ಮಿಡಿತಕ್ಕೆ ಸಮಾನ….ಅದನ್ನು ಕಡೆಗಣಿಸುವತ್ತ ಯೋಚಿಸುವುದು ಮಹಾ ಪಾಪ! ಸುಂದರ ಭಾವ ಸೂಕ್ಷ್ಮ ಸಂವೇದನೆ

Leave a Reply

Back To Top