ಮಾರುತೇಶ್ ಮೆದಿಕಿನಾಳ-ಕಸದಿಂದಲೇ ರಸ

ಕಾವ್ಯ ಸಂಗಾತಿ

ಮಾರುತೇಶ್ ಮೆದಿಕಿನಾಳ

ಕಸದಿಂದಲೇ ರಸ

ಕಸರು ಕಸ ಕಡ್ಡಿ ತ್ಯಾಜ್ಯ ಹೆಂಡೆ ಗೊಬ್ಬರ
ಇವುಗಳ ಬಳಸಿಕೊಂಡು ಬೆಳೆ ಬೆಳೆಯುತಾರ
ಬೆಳೆದ ಬೆಳೆ ಕಾಳುಕಡಿ ತಿನ್ನಲು ಬಳಸುತಾರ
ದವಸ ಧಾನ್ಯಗಳೆಲ್ಲವೂ ನಮಗೆ ಅನ್ನಆಹಾರ!

ಕಸದಿಂದಲೇ ರಸ ವಿಶೇಷ ತೆಗೆಯುತಾರ
ಈ ಮಣ್ಣು ನೀರಿನಲ್ಲಿ ಕೊಳೆವುದು ಗೊಬ್ಬರ
ಭೂಮಿಯೊಳಗೆ ಮೂಲ ವಸ್ತುಗಳ ಆಗರ
ಸಕಲ ಜೀವಿಗಳ ಬದುಕಿಗೆ ಜೀವನಾಧಾರ!

ಭೂಗರ್ಭ ಜಲದಿಂದ ಜೀವ ಜನನ ಜೀವನ
ಎಲ್ಲವೂ ಇಲ್ಲಿ ಅಡಗಿದೆ ಎಲ್ಲದರ ಮಿಶ್ರಣ
ತಿಳಿಯೋಣ ನಾವು ಮಣ್ಣಿನ ಸಾರದಗುಣ
ಸಕಲ ಜೀವಿಗಳ ಬದುಕಿಗೆ ರಸದೌತಣ!

ಸೇವಿಸುವ ಅನ್ನ ಆಹಾರದ ಮೊದಲ ಮೂಲ
ರವಿಯಿಂದ ಸಿಡಿದು ಬಂದಿದೆ ಈ ನೆಲ
ಸಕಲ ಜೀವಿಗಳನ್ನು ಸೃಷ್ಟಿಸಿದೆ ಈ ಜೀವಜಲ
ಗಾಳಿ ಬೆಳಕು ನೆಲ ಜಲ ಒಂದೇ ಸಕಲರಿಗೆಲ್ಲ!

ಎಲ್ಲವೂ ಮಣ್ಣಿಗೆ ಸೇರುತ್ತ ಮತ್ತೆ ಹುಟ್ಟುವುದು
ಗಿಡಮರಗಳ ಹಸಿರು ನಮ್ಮ ಉಸಿರಾಗಿರುವುದು
ಅನ್ನ ನೀಡುವ ನೆಲದ ರಕ್ಷಣೆ ನಮ್ಮೆಲ್ಲರದು
ಅದೇ ನೆಲವು ಮತ್ತೆ ನಮ್ಮನ್ನು ರಕ್ಷಿಸುವುದು!

——————–

ಮಾರುತೇಶ್ ಮೆದಿಕಿನಾಳ

Leave a Reply

Back To Top