ಎಂ. ಬಿ. ಸಂತೋಷ್-ಹಾಯ್ಕುಗಳು

ಕಾವ್ಯ ಸಂಗಾತಿ

ಎಂ. ಬಿ. ಸಂತೋಷ್

ಹಾಯ್ಕುಗಳು

1) ಪುಟ್ಟ ಕಂದನ
ಆಟಕ್ಕೆ ಜಾಗ ನಿಜ
ಅಮ್ಮನ ಎದೆ

2) ಸುಳ್ಳಿಗೆ ಜಾಸ್ತಿ
ಸಂಬಂಧಗಳು, ಸತ್ಯ
ನಿಜ ಒಬ್ಬಂಟಿ

3) ಅಮ್ಮ ನೀಡುವ
ತುತ್ತಿನಲಿ ನಿಜಕ್ಕೂ
ಅಮೃತವಿದೆ

4) ಮಣ್ಣಿಂದ ಬಂದೆ
ಮಣ್ಣಿಗೇ ನಾ ಸೇರುವೆ
ಇನ್ನೇಕೆ ಗರ್ವ

5) ತೋರಬೇಡವೇ
ನೀ ಗತ್ತು, ಕಾಯಲಾರೆ
ನಾ ತುಂಬಾ ಹೊತ್ತು

6) ಸಮಾಜದಲ್ಲಿ
ಮನುಷ್ಯತ್ವ ಸತ್ತಿದೆ
ಭ್ರಷ್ಟರಿಂದಲೇ

7) ನನ್ನವಳ ನಾ
ಅರಿತಾಗ ಸ್ವರ್ಗವು
ಕಾಲಡಿಯಲ್ಲಿ

8) ನಿಜ ಸುಂದರ
ಜಗತ್ತಿಗೆ ಬರಲು
ಕಾರಣ ಅಮ್ಮ

9) ನಾನು ಎಂದಿಗೂ
ಏಕಾಂಗಿಯಲ್ಲ , ಸುತ್ತ
ಕೃತಿಗಳಿವೆ

10) ಮರಣವಿಲ್ಲ
ಸಾಹಿತಿಗೆ, ಕೃತಿಯು
ಸಮಾಜದಲ್ಲಿ

11) ಬಂಗಾರ ಮಾರಿ
ಬದುಕು ಕೊಟ್ಟವಳು
ನನ್ನಾಕೆ ಚಿನ್ನ

12) ಕುಡಿಯಬೇಡ
ದೊರೆ ಹೊತ್ತಿರುವೆ ನಾ
ವಂಶದ ಹೊರೆ

13) ಹುತ್ತ ಕಟ್ಟುವ
ವಿದ್ಯೆಯು ಗೆದ್ದಲಿಗೆ
ವಾಸ ಹಾವಿಗೆ

14) ಹಣವಿಲ್ಲದ
ಬದುಕು, ಕಲಿಸುತ್ತೆ
ನೂರೆಂಟು ಪಾಠ

15) ಶಾಲೆ ಬಿಟ್ಟು ನೀ
ನಡೆದರೆ , ಸಿಕ್ಕೀತೇ
ಸಿಹಿ ಒಬ್ಬಟ್ಟು ?

16) ದುಃಖಿಸುತ್ತಾಳೆ
ಅಮ್ಮ, ತಪ್ಪು ದಾರಿಗೆ
ಮಗ ಹೋದಾಗ

17) ತುಂಬಿದ ಹೊಟ್ಟೆ
ಬದುಕಲ್ಲಿ ಸಾಕಷ್ಟು
ಆಟವಾಡುತ್ತೆ

18) ಪತ್ರಗಳಿಗೆ
ಬರಗಾಲ, ಕಾರಣ
ಈ ಅಂತರ್ಜಾಲ

19) “ಸತ್ಯ ” ಶಬ್ದಕ್ಕೆ
ಮರಣ ಅನ್ನುವುದು
ಇರುವುದಿಲ್ಲ

20) ಅಕ್ಷರ ಜ್ಞಾನ
ನಿಜವಾದ ಸಂಪತ್ತು
ಇಲ್ಲ ಆಪತ್ತು


  ಎಂ. ಬಿ. ಸಂತೋಷ್   

Leave a Reply

Back To Top