ಡಾ. ನಿರ್ಮಲಾ ಬಟ್ಟಲ ಕವಿತೆ-ಬೆಳಕು ಮೂಡಲಿ..

ಕಾವ್ಯ ಸಂಗಾತಿ

ಡಾ. ನಿರ್ಮಲಾ ಬಟ್ಟಲ

ಬೆಳಕು ಮೂಡಲಿ.

ಇರುಳ ಕಳೆದು
ಹಗಲು ಮೂಡಲಿ
ಕಾಯುವ ಕಣ್ಣಿನ
ನಿರೀಕ್ಷೆಗೆ ಬೆಳಕು
ಸಂಭ್ರಮವಾಗಲಿ….

ದಿನಕರನ ದರುಶನವಿಲ್ಲ
ಶಶಿಧರನ ಬೆಳದಿಂಗಳಿಲ್ಲ
ಕತ್ತಲೆಯ ಕೂಪದಲಿ
ದಿನಗಳುರುತಿವೆ
ಲೆಕ್ಕವಿಲ್ಲ….

ಕುಸಿದ ಬೆಟ್ಟದಡಿಯಲಿ
ಮೃತ್ಯುವಿನ ಬಾಯಿಯಲಿ
ಕ್ಷಣಕ್ಷಣವು ನರಕಯಾತನೆಯಿಲ್ಲಿ
ಹುಡುಕುತ್ತಿದ್ದೆವೆ
ಬರಿ ಬೆಳಕಿಗಾಗಿ…

ಕೈ ಚೆಲ್ಲಿತು ತಂತ್ರಜ್ಞಾನ
ಕೈಗೆ ಬಾರದ ವಿಜ್ಞಾನ
ಕರ ಹಿಡಿಯುವುದೆ
ಹರಕೆ ಹಾರೈಕೆ ಸುಜ್ಞಾನ

ಇರುಳು ಉರುಳು
ತ್ತಿಲ್ಲ ಬೆಳಕಿನೆಡೆಗೆ
ಓ… ಬಾಂಧವರೇ
ಒಂದು ಬಿನ್ನಹ
ಎಳೆದು ತನ್ನಿ ಆ ಸೂರ್ಯನ
ನಮ್ಮೆಡೆಗೆ…
ಒಂದೇ ಒಂದು ಗಳಿಗೆ
ಕಣ್ಣು ಮುಚ್ಚುವ ಮುನ್ನ
ಬೆಳಕ ತುಂಬಿಕೊಳ್ಳಬೇಕಿದೆ


ಡಾ. ನಿರ್ಮಲಾ ಬಟ್ಟಲ

7 thoughts on “ಡಾ. ನಿರ್ಮಲಾ ಬಟ್ಟಲ ಕವಿತೆ-ಬೆಳಕು ಮೂಡಲಿ..

      1. ತುಂಬಾ ಅರ್ಥಪೂರ್ಣವಾದ ಕವಿತೆ ಧನ್ಯವಾದಗಳು ಮೇಡಂ

  1. ಪ್ರಸ್ತುತ ಸನ್ನಿವೇಶಗಳಿಗೆ ಸ್ಪಂದಿಸಿ ಬೆಳಕಿನ ಮೂಲಕ ಕಷ್ಟವನ್ನು ಪರಿಹರಿಸುವ ಆಶಯವನ್ನು ಹೊಂದಿದ ಕವಿತೆ. ಎಳೆದು ತನ್ನಿ ಸೂರ್ಯನ ಒಂದು ಗಳಿಗೆ ನಮ್ಮೆಡೆಗೆ ಎನ್ನುವ ಪ್ರತಿಮಾತ್ಮಕ ವಾದಂತಹ ವಾಕ್ಯ ಕವನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಧನ್ಯವಾದಗಳು ನಿರ್ಮಲ ಮೇಡಂ ಅವರೇ

  2. ಎಳೆದು ತನ್ನಿ ಸೂರ್ಯನ….. ಕಣ್ಮುಚ್ಚುವ ಮುನ್ನ ತುಂಬಿಕೊಳ್ಳುವ ಬೆಳಕು

    ಚೆಂದದ ಆಶಯ

  3. ಎಳೆದು ತನ್ನಿ ಸೂರ್ಯನ… ಆಶಯ ಸುಂದರ ಅಭಿವ್ಯಕ್ತಿ ಯಾಗಿ ಮೂಡಿದೆ ಅಭಿನಂದನೆಗಳು ನಿರ್ಮಲ

Leave a Reply

Back To Top