ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಪ್ರತಿಭಟಿಸುವ ಹಾಗಿಲ್ಲ
ಧರಣಿ ಮುಷ್ಕರ ಸಂಪು
ಸರಕಾರ ವ್ಯವಸ್ಥೆ ವಿರುದ್ಧ
ಪ್ರತಿಭಟಿಸುವ ಹಾಗಿಲ್ಲ
ಇದು ಸರಕಾರದ ಅಧಿಸೂಚನೆ
ರೈತರ ಕಬ್ಬು ಒಣಗಿದೆ
ಹಳೆಯ ಪಿಂಚಣಿ ಯೋಜನೆ
ಮಹದಾಯಿ ಕಳಸಾಗೆ ಒತ್ತಡ
ಖಾಯಂ ನೇಮಕಾತಿಗೆ ಆಗ್ರಹ
ಸುವರ್ಣ ವಿಧಾನಸೌಧದ ಸುತ್ತ
ಎಳುತ್ತಿವೆ ಗುಡಿಸಲು ಟೆಂಟು
ಸಹಕಾರಿ ಸಂಸ್ಥೆ ಮುಳುಗಿಸಿದ
ಡೆಪಾಸಿಟ್ ಠೇವಣಿ ಗಂಟು
ಸರಕಾರದ ಅಬ್ಬರದ ಘೋಷಣೆ
ಹಲವು ಹುಸಿ ಯೋಜನೆ ಭರವಸೆ
ಈಡೆರಿಸದೆ ನಿತ್ಯ ಜನರ ಶೋಷಣೆ
ಕೇಳುವ ಹಾಗಿಲ್ಲ ಹಕ್ಕು ನ್ಯಾಯ
ಚಳಿಗಾಲದ ಅಧಿವೇಶನ
ಬಿಸಿ ಬಿಸಿ ಚರ್ಚೆ ಘರ್ಷಣೆ
ಬೇಕಿಲ್ಲ ಆಡಳಿತ ವಿರೋಧದವರಿಗೆ
ಪ್ರಶ್ನೆ ಮಾಡುವ ಹಾಗಿಲ್ಲ ಸೂಚನೆ
ಉತ್ತರ ಪರಿಶೀಲಿಸುತ್ತೇವೆ
ಬಡವರ ಕಾರ್ಮಿಕರ ಕಣ್ಣೀರು
ಬುಗಿಲೆದ್ದರೆ ಕ್ರಾಂತಿ ಭೀತಿ
ಅಸಹಾಯಕರ ಕೊಲ್ಲುವ
ಖಾದಿ ಕಾಕಿಗಳ ರೀತಿ
ಸತ್ತು ಹೋಗಿದೆ ಪ್ರಜಾಪ್ರಭುತ್ವ
ಸರಕಾರ ಅಧಿವೇಶನ ಸಿರಿವಂತರ ಆಟ
ಬೇಡವಾಯಿತು ಸತ್ಯ ಸಮತೆ
ಬಿತ್ತು ಗಾಂಧಿಗೆ ಎಂದೋ ಗುಂಡು
ಪ್ರತಿಭಟಿಸುವ ಹಾಗಿಲ್ಲ
ಎಚ್ಚರ ಎಚ್ಚರ ಯಾರೂ
ಸುಳಿಯುವ ಹಾಗಿಲ್ಲ ಸುವರ್ಣ ಸೌಧ
ಬಡವರ ಪ್ರಜೆಗಳ ಸ್ಮಶಾನ ಮೌನ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ವಾಸ್ತವದ ಕಟುಸತ್ಯವನ್ನು ಎಳೆಎಳೆಯಾಗಿ ಬಿಂಬಿಸಿ… ಪ್ರಜಾಪ್ರಭುತ್ವವನ್ನು ಪ್ರಶ್ನಿಸುವ ಕವನ ಎಲ್ಲರನ್ನೂ ಎಚ್ಚರಗೊಳಿಸುವಂತಿದೆ.. ಸರ್
ಸುಶಿ
ನಮ್ಮ ಧ್ವನಿಯೇ ಅಡಗಿ ಹೋಗಿದೆ.
ಅರ್ಥಪೂರ್ಣ ಕವನ ಸರ್
ಕ್ರಾಂತಿಕಾರಕ ಕವನ ಸರ್
ಇಂತಹ ಸಂದರ್ಭದಲ್ಲಿ ತಮ್ಮ ಕವನ ಇನ್ನೂ ಹರಿತ ಮತ್ತು ತೀವ್ರವಾಗಿ ಸರ್
ಶ್ರೀಕಾಂತ ಹೆಗಡೆ
Beautiful poetry
ವಾಸ್ತವಿಕ ನೆಲೆಗಟ್ಟಿನಲ್ಲಿ ರಚಿಸಿದ್ದು ಸುಂದರ ಮತ್ತು ವೈಚಾರಿಕ
ಮನ ಮುಟ್ಟ ವಂತಹ
ಕಬನ್
ಅಸಹಾಯಕತನದ ನೋವು ಸಂಕಟ ಪರಿಸ್ಥಿತಿಯ ಅನಿವಾರ್ಯತೆಯನ್ನು ಕವನದಲ್ಲಿ ಚಿತ್ರಿಸಿದ್ದೀರಿ ಧನ್ಯವಾದಗಳು ಸರ್
Excellent poem