ಡಾ ಅನ್ನಪೂರ್ಣಾ ಹಿರೇಮಠ-ಗಜಲ್

ಕಾವ್ಯ ಸಂಗಾತಿ

ಡಾ ಅನ್ನಪೂರ್ಣಾ ಹಿರೇಮಠ-

ಗಜಲ್

ಪ್ರೀತಿ ಎಂದರೆ ಸಂತೆಯೊಳಗಿನ ಬಾಡಿ ಹೋಗುವ ತರಕಾರಿಯಲ್ಲ ತಿಳಿಯೋ ಸಖ
ಒಲವೆಂದರೆ ಹೊಲದೊಳಗಿನ ಒಣಗಿ ಹೋಗುವ ಬಳ್ಳಿಯಲ್ಲ ತಿಳೆಯೋ ಸಖ

ಭಾವ ಬಿಂದಿಗೆಯಲಿ ತುಂಬಿಟ್ಟ ಜೇನಂತೆ ಕರಗದೆ ಜಿನುಗುತಲೆ ಇರುವುದು ಅರಿವಿಲ್ಲವೇ
ನಂಬಿಗೆ ಎಂದರೆ ಶಾಹಿಯೊಳಗಿನ ಕರಗಿ ಹೋಗುವ ಮಸಿಯಲ್ಲ ತಿಳಿಯೋ ಸಖ

ಎದೆಗೂಡಲಿ ಭದ್ರವಾಗಿಟ್ಟ ನಂಬಿಗೆ ಕೆಡದೆ ಬೆಳಗುತಲೆ ಶಾಶ್ವತವಿಹುದು ತಿಳಿಯುತ್ತಿಲ್ಲವೇ
ವಿಶ್ವಾಸವೆಂದರೆ ಕೊಡದೊಳಗಿನ ತೀರಿ ಹೋಗುವ ನೀರಲ್ಲ ತಿಳಿಯೋ ಸಖ

ಅಂತರಾಳದಲಿ ಅದುಮಿಟ್ಟ ಮಮತೆ ಬಿಡದೆ ತುಡಿಯುತಲೆ ಸತ್ಯವಾಗಿಹುದು ಸಾಕಲ್ಲವೇ
ಪ್ರೇಮವೆಂದರೆ ಪರಿಣಯದೊಳಗಿನ ಮರೆತು ಹೋಗುವ ಸರಸವಲ್ಲ ತಿಳಿಯೋ ಸಖ

ಅಣುಳ ಕಣ್ಣ ಕೊಳದಲ್ಲಿ ಹೂತಿಟ್ಟ ಭರವಸೆ ಕರಗದೆ ಹೊಳೆಯುತನಿತ್ಯವಾಗಿಹುದು ಸಾಕಲ್ಲವೇ
ಸಂಬಂಧವೆಂದರೆ ವ್ಯವಹಾರದೊಳಗಿನ ಬಳಸಿ ಹೋಗುವ ಹಣವಲ್ಲ ತಿಳಿಯೋ ಸಖ


ಡಾ ಅನ್ನಪೂರ್ಣಾ ಹಿರೇಮಠ

One thought on “ಡಾ ಅನ್ನಪೂರ್ಣಾ ಹಿರೇಮಠ-ಗಜಲ್

  1. “ಪ್ರೀತಿಯೆಂದರೆ ಸಂತೆಯೊಳಗಿನ ಬಾಡಿ ಹೋಗುವ ತರಕಾರಿಯಲ್ಲ”
    ಅದ್ಭುತ ಸಾಹಿತ್ಯ!

Leave a Reply

Back To Top