ಡಾ.ಡೋ.ನಾ.ವೆಂಕಟೇಶ ಆಸೆಯೇ ದುಃಖಕ್ಕೆ ಮೂಲ.

ಕಾವ್ಯ ಸಂಗಾತಿ

ಡಾ.ಡೋ.ನಾ.ವೆಂಕಟೇಶ

ಆಸೆಯೇ ದುಃಖಕ್ಕೆ ಮೂಲ.

ಎಪ್ಪತ್ತರ ಹರಯದಲ್ಲೂ
ಇಪ್ಪತ್ತರ ಕನಸುಗಳ ಮೊಳಕೆ! ನಶಿಸಿ ಹೋಗುವ ಮುನ್ನ
ಮಿದುಳಿನ ಕೇಂದ್ರ
ನೆನಪುಗಳ ಮೆರವಣಿಗೆ ಚೆನ್ನ

ನಿನ್ನ ಕಂಡಾಗ,ಕಾಣದಾಗಲೆಲ್ಲ ನಿನ್ನದೇ ಧ್ಯಾನ ,ಧಾನ್ಯವಾಗಿ
ಬಣವೆ.
ಸುಗ್ಗಿಯ ಕುಣಿತ, ಹಾಡು
ಕನಸಿನ ಹಸೆ

ಹೇಗಿರಬಹುದು ನೀನು
ನೀಲಿ ಕಂಗಳಿಗೆ ಪೊರೆ
ಬಂದಿದೆಯಾ!
ಉದ್ದನೆಯ ಜಡೆ ಗಿಡ್ಡವಾಗಿದೆಯಾ ಚಿನ್ನ. ಮತ್ತೆ
ಮಾದಕ ಮಾತುಗಳ ರಾಗ ತಾಳ ತಪ್ಪಿದೆಯಾ
ಅಳ್ಳಕದ ಲಂಗದ ಸುಂದರಿ
ಈಗೇನು ಧರಿಸುತ್ತೀಯಾ

ನಾನೋ ನೋಡಿದಾಕ್ಷಣಕ್ಕೆ ಕಾಣಿಸುತ್ತೀನಂತೆ ವಯಸ್ಸಾದಂತೆ, ಆದರೇನಂತೆ
ಉದುರಿದ ಕೂದಲ ಬಾಚುತ್ತೇನೆ. ಮಬ್ಬಾದ ಕಂಗಳ
ಪೊರೆ ತೆಗಿಸಿದ್ದೇನೆ. ಆಸರೆಗೋಲ ಸಹಾಯವಿಲ್ಲದೇ ಬಿರು ಬಿರನೆ
ನಡೆಯುತ್ತೇನೆ ಚಿನ್ನಾ

ಅದೇ ಕನಸಲ್ಲಿ ಮಿಂದು
ಮನಸಲ್ಲಿ ಮಿಂಚುತ್ತೇನೆ
ಮಿಂಚುಳ್ಳಿಯ ಥರಾ!

ನಿನ್ನ ನೆನಪಿನ ಕೇಂದ್ರ
ಮಿದುಳಿನ ಒಳ ಹೊರಗೆಲ್ಲಾ
ಆವರಿಸಿ
ಹೊರಟ ಹೋಗುವ ಮುನ್ನ
ನಿಜ್ಜ ನಿನ್ನ ಕಾಣುವಾಸೆ

ಆಸೆಯೋ-
ಆಸೆಯೇ ದುಃಖಕ್ಕೆ ಮೂಲವೋ!


ಡಾ.ಡೋ.ನಾ.ವೆಂಕಟೇಶ

7 thoughts on “ಡಾ.ಡೋ.ನಾ.ವೆಂಕಟೇಶ ಆಸೆಯೇ ದುಃಖಕ್ಕೆ ಮೂಲ.

  1. ಆಸೆಯೇ ದುಃಖಕ್ಕೆ ಮೂಲವೇ?
    ನಿಮ್ಮ ಅನುಭವದ ಈ ಕಿವಿಮಾತನ್ನು
    ಸಂದರವಾಗಿ ಕವಿತಾರೂಪದಲ್ಲಿ ಪ್ರಕಟಿಸಿದ್ದೀರಿ. ಅದನ್ನು ಓದಿ ಆನಂದವಾಯಿತು..
    ಧನ್ಯವಾದಗಳು.

Leave a Reply

Back To Top