ಪ್ರೊ. ಸಿದ್ದು ಸಾವಳಸಂಗ ಕವಿತೆ-ಮನಸ್ಸು ಗೆದ್ದವನೇ ಮಹಾದೇವ

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

ಮನಸ್ಸು ಗೆದ್ದವನೇ ಮಹಾದೇವ




ಹರಿಯ ಬಿಟ್ಟರೆ ಮನಸ್ಸು
ಎತ್ತೆಂದರತ್ತ ಹರಿಯುತ್ತದೆ !
ಲಗಾಮು ಇಲ್ಲದ ಕುದುರೆಯಂತೆ
ಮನಸ್ಸು ಗೆಲ್ಲುವುದು ಅಷ್ಟು ಸುಲಭವಲ್ಲ !
ಮನಸ್ಸು ಗೆದ್ದವನೇ ಮಹದೇವ !
ಕ್ಷಣಕ್ಕೊಂದು ಯೋಚನೆ
ಮನದ ತುಂಬಾ ಸಾವಿರಾರು ಆಲೋಚನೆ !
ಒಮ್ಮೊಮ್ಮೆ ಕೋಪ ; ಒಮ್ಮೊಮ್ಮೆ ತಾಪ
ಎಲ್ಲದಕ್ಕೂ ಸುಮ್ಮ- ಸುಮ್ಮನೆ ಪರಿತಾಪ !
ಮನ ಮಣ ಭಾರವಾಗಿ ತಲೆನೋವು
ಹಚ್ಚಿದರು ಕಡಿಮೆಯಾಗದು ಜಂಡುಬಾಂಮು !
ಮನಸ್ಸಿಗೆ ಮದ್ದಿಲ್ಲ
ಹಣ ಕಂಡರೆ ಹಪಾಹಪಿ !
ಹೆಣ್ಣು ಕಂಡರೆ ಹುಚ್ಚು ಬೀದಿ ನಾಯಿ !
ಬಂಗಾರ ಧರಿಸಿ ಮೆರೆಯಬೇಕೆನಿಸುತ್ತದೆ
ಸಿಂಗಾರ ಮಾಡಿಕೊಳ್ಳಬೇಕೆನಿಸುತ್ತದೆ !
ಮನಸ್ಸು ಒಮ್ಮೊಮ್ಮೆ ನಿಶಾಚರ
ದಿಕ್ಕು ದಿಸೆಯಿಲ್ಲದೆ ಅಲೆಯುತ್ತದೆ !
ಎತ್ತರಕ್ಕೆ ಏರುವವರ ಕಂಡರೆ
ಮನ ಮತ್ಸರ ಪಡುತ್ತದೆ !
ಹಾಗೆಯೇ ಕೆಳಕ್ಕೆ ಎಳೆದು ಕಂದಕ್ಕೆ
ಒಗೆಯಬೇಕೆನಿಸುತ್ತದೆ !
ಒಡದ ಮನಸ್ಸುಗಳನ್ನು
ಒಂದುಗೂಡಿಸಲು ಸಾಧ್ಯವಿಲ್ಲ !
ಮನಸ್ಸು ಕೆಟ್ಟು ಹುಚ್ಚರಾಗಿ
ಬೀದಿ – ಬೀದಿ ಅಲೆಯುವವರಿದ್ದಾರೆ !
ಕಲ್ಲು ಮನಸ್ಸನ್ನು ಕರಗಿಸಲು
ಎಂದೆಂದಿಗೂ ಅಸಾಧ್ಯ !
ಮನವೇ ನೀನೇಷ್ಟು ಕಠೋರ
ಮನ ಮಲ್ಲಿಗೆಯಾಗುವುದು ಯಾವಾಗ ?

———————–

ಪ್ರೊ. ಸಿದ್ದು ಸಾವಳಸಂಗ, 

Leave a Reply

Back To Top