ಕಾವ್ಯಸಂಗಾತಿ
ಡಾ.ಸರೋಜಾ ಜಾಧವ
ಸತ್ಯ
ಸತ್ಯ ಯಾವಾಗಲೂ ಒಂಟಿ
ಅದರ ಸುತ್ತಲೂ ಮುಳ್ಳುಕಂಟಿ
ಸತ್ಯ ನುಡಿಯಲು ಚುಚ್ಚಿವೆ
ಮುಳ್ಳಮೊನೆಯು ಭರ್ಚಿಯು
ಸುಳ್ಳು ಬಣ್ಣದ ಬಟ್ಟೆ ಉಟ್ಟು
ಕಿಲಕಿಲನೆ ನಗುವ ಗುಟ್ಟು
ಸತ್ಯ ನರಳುತ ಅಳುತಿದೆ
ಸುಳ್ಳು ನಗುತಾ ಕುಣಿದಿದೆ
ಹಣ್ಣು ತಿಂದೆವ ತಿಂದನು
ಅರಿಯದವಗೆ ಸಿಪ್ಪೆಒಗೆದನು
ಅಪರಾಧಿ ಮೋಜಿನಲಿ
ನಿರಪರಾಧಿ ನೋವಿನಲಿ
ಕರ್ಮ ಉತ್ತರ ನೀಡಲು
ಧರಣಿ ಬಾಯಿ ಬಿಡಲು
ಮೋಸಗಾರ ನಾಶವಾಗಲು
ಸತ್ಯ ಜಯವ ಪಡೆಯಲು