ಅನುಜನಾರ್ಧನ್ ನೆಟ್ಟಾರು ಕವಿತೆ-ಅಮ್ಮ

ಕಾವ್ಯ ಸಂಗಾತಿ

ಅನುಜನಾರ್ಧನ್ ನೆಟ್ಟಾರು

ಅಮ್ಮ

ಉಸಿರ ಬಿಗಿ  ಹಿಡಿದು ಬಸಿರನ್ನು  ಧರೆಗಿಳಿಸಿ….
ಹೃದಯ ಬಿರಿಯುವ ಯಾತನೆಯಲು ನಿನಗೊಂದು ಹೆಸರಿರಿಸಿ……
ಒತ್ತರಿಸುವ ನೋವಿನಲು…. ಮರುಜನ್ಮ ಪಡೆದವಳು
ಕಿರು ನೋಟದಿ ಆ ಮೊಗವ ತುಂಬಿಕೊಂಡವಳು …

ಸುಂದರ ಸ್ವಪ್ನಲೋಕದಲ್ಲಿ ತೇಲುತ್ತಿದ್ದ ಮನವು….
ತನ್ನೊಡಲ ಕುಡಿಗಾಗಿ ಮಿಡಿಯಿತು ಆ ಕ್ಷಣವು…….
ತನ್ನ ಪ್ರೇಮದ ಸಿರಿಗೆ ಈ ಬದುಕೇ ಶೃಂಗಾರ.
ತನ್ನೊಲವ ನಿಧಿಗೆ ಸಂಭ್ರಮದ ಮಮಕಾರ…

ಬಣ್ಣದ ಬದುಕಿನ ಕನಸಿತ್ತು ಮನಸಿತ್ತು….
ಸ್ವಚ್ಛಂದವಾಗಿ ಹಾರಲು ರೆಕ್ಕೆಯು ಬಲಿತಿತ್ತು..
ಆದರೂ ಹಾರದೆ ಮುದುರಿ ಕುಳಿತಿತ್ತು…..
ತನ್ನ ಪ್ರತಿರೂಪಕ್ಕೆ ಕಾವು ಕೊಡಲು….

 ದಿನವಿಡೀ ಕಾಯಕದಿ ಬಸವಳಿದ ಜೀವವದು
ಮುಖದ ನೆರಿಗೆಯು ಕಥೆಯ  ಸಾರಿ ಹೇಳುತ್ತಿತ್ತು
ಬಳಲಿದ ಬದುಕಿಗೆ ಬೆಳಕಾಗಬೇಕು ಸದಾ…
ಮತ್ತೆ ನೀ ಮಾತೃ ಹೃದಯವಾಗಿ….

——————————

ಅನುಜನಾರ್ಧನ್ ನೆಟ್ಟಾರು

ಕೇಂದ್ರ ಸಂಪನ್ಮೂಲ ವ್ಯಕ್ತಿಗಳು
ಸೋಣಂಗೇರಿ, ಸುಳ್ಯ ತಾಲೂ

Leave a Reply

Back To Top