ಕಾವ್ಯ ಸಂಗಾತಿ
ಎನ್ ಎ ಭಾವಿಕಟ್ಟಿ (ನಭಾ)
ಮಾಂತ್ರಿಕ
ಖಾಲಿ ಮನಸಲಿ ಕನಸನು ತುಂಬುತ
ನನ್ನನೆ ನನಗೇ ಪರಿಚಯಿಸಿದನು ಕೋರುವ ಮೊದಲೇ ಕರುಣಿಸಿ ಬಿಡುವ
ದೇವತೆಯಂತ ಗುಣದವನು
ಎಲ್ಲೋ ಇದ್ದರೂ ಇಲ್ಲೇ ಇರುವ
ಭ್ರಮೆಯ ಮೂಡಿಸಿ ಕಾಡುವನು
ಹಗಲಿರುಳುಗಳ ಪರಿವನೇ ಮರೆಸಿ
ಪರಿಭ್ರಮಣೆಯಲಿ ಸಿಲುಕಿಸಿದವನು
ನಾನೆಲೆಯಾದರೆ ತಾನೇ ಹಸಿರು
ದ್ಯುತಿಸಂಶ್ಲೇಷಣೆ ಕ್ರಿಯೆ ಅವನು
ಹೂವಾದರೆ ನಾ ತಂಗಾಳಿಯು ತಾ
ಸೋಕದೇ ತಾಕಿ ಮಾಗಿಸಿದವನು
ಗ್ರಹಣಗಳಿರದಾ ಲೋಕವತ ತೋರಿಸೋ
ನಕ್ಷತ್ರಗಳ ಸ್ನೇಹಿತನು
ಕಣ್ಣು ಮಿಟುಕಿಸಲು ಸಹ ತನ್ನನೇ ಕೇಳುವ
ಹಾಗೆ ಮಾಡಿದ ಮಾಂತ್ರಿಕನು
ಎನ್ ಎ ಭಾವಿಕಟ್ಟಿ (ನಭಾ) ಹುನಗುಂದ