ರೂಪಶ್ರೀ ಎಂ ಅವರಕವಿತೆ-ಸಾಲೆರಡು ಗೀಚು

ಕಾವ್ಯ ಸಂಗಾತಿ

ರೂಪಶ್ರೀ ಎಂ

ಸಾಲೆರಡು ಗೀಚು

ನನಗಾಗಿ ಬರದಿದ್ದರೂ
ಕವಿತೆಯ ಸಾಲೆರಡು ಗೀಚು
ನೆನಪಾದಾಗೆಲ್ಲ
ಹಾಡೊಂದು ಗುನುಗು
ಹೂವಲ್ಲದಿದ್ದರೂ
ಮುಳ್ಳನ್ನಾದರೂ ಹಾಸು

ಜೊತೆಯಿರಲು ಹಿಂಸೆ ಎಂದು
ಹಂಸದಂತೆ ತೇಲಿಹೋದೆ ನೀನು
ನಾವು ಕೂತ ಕಲ್ಲುಬೆಂಚು
ನೆನಪಿಸಿದೆ ನಮ್ಮಿಬ್ಬರ ಪಿಸುಪಾತು
ಆ ಹೂ ಮಾರುವಾಕೆಗೂ
ನನ್ನ ಕುರಿತು ಶಂಕೆ ನೋಡು
ಎದುರಾದಾಗ ನನ್ನ ಕಣ್ಣೊಮ್ಮೆ ನೋಡು
ನಿನ್ನ ಮರೆತ ಕುರುಹು ಕಾಣಬಹುದೇನೋ ಹುಡುಕು !


ರೂಪಶ್ರೀ ಎಂ

ರೂಪಶ್ರೀ ಎಂ

2 thoughts on “ರೂಪಶ್ರೀ ಎಂ ಅವರಕವಿತೆ-ಸಾಲೆರಡು ಗೀಚು

  1. ನಿನಗೆಂದೆ ಗೀಚಿದ್ದ
    ಸಾಲುಗಳಿಗು ಸಂದೇಹ
    ತೊರೆದು ಹೋದ ಮೇಲೆ
    ನಿನಗಾಗಿ ಬರೆದದ್ದೆ
    ಲೇಖನಿಗು ಅನುಮಾನವು

Leave a Reply

Back To Top