ಕಾವ್ಯ ಸಂಗಾತಿ
ಶ್ರೀನಿವಾಸ ಜಾಲವಾದಿ
ಭಾರ ಹೊತ್ತವರು
ತಲೆಯ ಮೇಲಿನ ಭಾರ ಹೊತ್ತವರು
ತಲೆ ಎತ್ತಿ ತಿರುಗುವವರು ಅವರು
ಭಾರ ಅತಿ ಭಾರ ಜಡತ್ವದನುಭವ
ಲೋಕದ ಭಾರ ಹೊತ್ತವನೂ ಹೀಗೆಯೆ?
ಇರಬಹುದು ಇರಬಹುದು ಎಲ್ಲರ
ನೋಟ ನೋಡಿದರೆ ಹಾಗೇ ಅನಿಸಿತಲ್ಲ?
ತಲೆಯಲಿರುವುದನಿಳಿಸಿ ನಿಂತ ಸಂತ
ಕಥೆಯಲಿ ಎಲ್ಲ ಹೂರಣ ತುಂಬಿ ತಾ
ಕಡಿಕೆ ಮರೆಗೆ ಸರಿಯೊ ಅವಸರದಲಿ
ಇರುವವ ತಾನೇ ಕಥೆಯಲಿ ಮುಖ್ಯ
ಭೂಮಿಕೆಯಲಿ ವಿಜೃಂಭಿಸಿದನಲ್ಲ?
ಇದಕೇನ ಹೇಳೂದು ತಿಳಿಯುತಿಲ್ಲ!
ಅವನೇ ಅವನು ಒಮ್ಮೆ ಎಂದವ
ಬಿಟ್ಟೂ ಬಿಡದೇ ನಿರಂತರ ಮೈಮರೆಸಿದ
ಜಗದ ಜಂಜಡ ಮರೆಸಿದಾತ ಜಗದಾತ
ಕೈಲಾಸದಲಿ ಶಂಕ ಚಕ್ರ ತ್ರಿಶೂಲಧರ
ವೈಕುಂಠವೂ ಅವನದೇ ಅಂತೆ ಹೌದೆ?
ಗೊತ್ತಿಲ್ಲವೆಂದ ಪಾರ್ವತ್ಲಕ್ಷ್ಮಿ ಭಾರವಿಳಿಸಿ
ನಡೆದರು ಅರಿವಿನ ಮನೆಗೆ ನಿರಾಳವಾಗಿ!
ಎಲ್ಲೇ ಎಲ್ಲ ಮೀರಿದವ ಮತ್ತೆ ಬರುವನೆ?
ಹೊಸ ಬುತ್ತಿಯ ಭಾರದ ಭಾವ ತರುವನೆ?
ಗೊತ್ತಿಲ್ಲ ಏನು ಬೇಕಾದರೂ ಆದೀತಲ್ಲಿ
ಇಂವ ಇರುವ ಭಾರ ಭಾವ ಅರಗಿದಲ್ಲಿ!
ಶ್ರೀನಿವಾಸ ಜಾಲವಾದಿ
ನಿವೃತ್ತ ಉಪಪ್ರಾಂಶುಪಾಲರು
ಸುರಪುರ
ತುಂಬಾ ಮನದಟ್ಟಾಗಿದೆ.
ಮನದ ಭಾರ ಇಳಿಸಿದ ಕವನ. ದಮನಿತರ ದನಿ ಇದು.
ಧನ್ಯವಾದಗಳು