ಕಾವ್ಯ ಸಂಗಾತಿ
ಡಾ.ಸರೋಜಾ ಜಾಧವ-
ಎಂದು ನಗುವ ನಮ್ಮ ರೈತ
ಕಾಡುತಿದೆ ಒಂದು ಪ್ರಶ್ನೆ
ಎಂದು ನಗುವ ನಮ್ಮ ರೈತ
ಹಸಿದೊಡಲಿಗೆ ಅನ್ನದಾತ
ಮುಗಿಲ ಹೊದಿಕೆ ನೆಲವೆ ಹಾಸಿಗೆ
ಮಿಂಚು ದೀಪದ ನಡುವೆ ನಿದ್ರೆಗೆ
ತಾರೆ ಚಂದ್ರರ ಬೆಳಕು ಅವಗೆ
ದುಡಿವನವನು ರಾತ್ರಿವರೆಗೆ
ಗುಬ್ಬಿ ಕಾಗೆ ಗೂಗೆಯಲ್ಲ
ಕಾಳು ತಿಂದು ತೇಗಿವೆ
ಇರುವೆ ಎರೆಹುಳುವೆಲ್ಲ
ಅನ್ನವುಂಡು ಬೀಗಿವೆ
ಸಕಲ ಜೀವರಾಶಿಗೆ
ಅನ್ನದಾತ ಬಾಳಿಗೆ
ಸಿಗುವ ಸಾಲದ ಶೂಲಕೆ
ಮಳೆಬಾರದ ಕಾರಣಕೆ
ಕಾಳು ಬೇಳೆ ನಿಟ್ಟಿನಲ್ಲಿ
ಮಧ್ಯವರ್ತಿ ಪಾಲಿನಲ್ಲಿ
ಬೆಳೆದ ರೈತಗೆ ಇಲ್ಲವಿಲ್ಲಿ
ಅಷ್ಟು ಇಷ್ಟು ಕೊನೆಗೆ
ಉಳಿದ ಹಣ ಮನೆಗೆ
ಸಾಲವೇ ಗತಿ ಕೊನೆಗೆ
ಕೊರಳೊಡ್ಡುತಿಹ ನೇಣಿಗೆ
ಅನ್ನದಾತನ ನೋವು
ತಟ್ಟಲಾರದೆ ಆಳುವವರಿಗೆ
ಉಳುಮೆ ಮಾಡದಿದ್ದರಾತ
ಅಳುವೆ ಗತಿ ಎಲ್ಲರಿಗೆ
ಜಗವು ನಗುವುದು ಯಾವಾಗ
ರೈತ ನೆಮ್ಮದಿಯ ನಗು ನಕ್ಕಾಗ
ಡಾ.ಸರೋಜಾ ಜಾಧವ.ಧಾರವಾಡ
ಉಪನ್ಯಾಸಕಿ, ದಾರವಾಡ