ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕಸದ ತೊಟ್ಟೆ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಕಸದ ತೊಟ್ಟೆ

ಗೆಳೆಯರೇ
ನಾವು ಬದುಕುತ್ತಿಲ್ಲ
ನಿತ್ಯ ನಿರಂತರ
ಸಾಯುತ್ತಿದ್ದೇವೆ
ಕಣ್ಣ ಮುಂದೆ
ಸುಲಿಗೆ ಶೋಷಣೆ
ಮೋಸ ವಂಚನೆ ಸುತ್ತಲೂ
ಜಾತಿ ಮತ್ಸರ ಕೋಮು ಗಲಭೆ
ಭ್ರಷ್ಟತನದ ಸಂಭ್ರಮ
ಕೆಲಸವಿಲ್ಲದ ಕೈಗಳು
ಮದುವೆಯಿಲ್ಲದ ಮಕ್ಕಳು
ಹಸಿವಿನಿಂದ ಬಳಲುತ್ತಿವೆ
ಕೊಳಗೇರಿ ಜೀವಗಳು
ಮಳೆಯಿಲ್ಲದೆ ಬೆಂಡಾದ
ಬಿರುಕು ನೆಲದ ಯೋಗಿಯು
ಟಿವಿ ಪತ್ರಿಕೆ ಸುದ್ಧಿ ಸಂಸ್ಥೆ
ಹೊಗಳು ಯಂತ್ರವಾದವು
ಅಬಲೆಯರ ಅತ್ಯಾಚಾರ
ಮಂಗಳ ಮುಖಿಯರ ಗೋಳು
ನಿರ್ಭಯಳ ಸಾವಿಗೆ
ಎಂದು ಸಿಗುವುದು ನ್ಯಾಯವು
ಸ್ವತಂತ್ರ ಬಂದರೂ
ನಿಲ್ಲಲೊಲ್ಲದು ದೀನ
ದಲಿತರ ಹತ್ಯೆಯು
ದುಡ್ಡು ಜಾತಿ ಬಲದಿಂದಲೇ
ಪುಣ್ಯ ಭಾರತ ಲೂಟಿಯು
ಕೊಲೆ ಹಿಂಸೆ ದೌರ್ಜನ್ಯಕೆ
ಪ್ರಗತಿಪರರು ಸತ್ತರು
ಕವನ ಓದಿ ಖುಷಿ ಆಗಿ
ಮೌನದಿಂದ ಮಲಗುವವರು
ವ್ಯವಸ್ಥೆಯನ್ನು ಪ್ರಶ್ನೆ ಮಾಡದ
ನಮ್ಮ ಮೆದುಳು ಬುದ್ಧಿ
ಕಸದ ತೊಟ್ಟೆಯು
ಸಾಯುತ್ತಿದ್ದೆವೆ ನಿತ್ಯ ನಿತ್ಯ

ಬದುಕುವ ನೆಪದಲ್ಲಿ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಔಷಧ ಸಂಶೋಧಕ ವಿಜ್ಞಾನಿ-ರಾಮದುರ್ಗ

9 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕಸದ ತೊಟ್ಟೆ

  1. ನಿಜ ಸರ್ ಉತ್ತಮ ” ಆತ್ಮಶೋಧನೆ ಮಾಡುವ ಕವನ

  2. ಸಮಾಜದ ನಿಜದ ವಸ್ತು ಚಿತ್ರಣ ಸರ್. ಕ್ರಾಂತಿಕಾರಿ ಕವನ. ಮನಸಿನ ಕಸದ ತೊಟ್ಟಿ ಯನ್ನೂ ಒಳ್ಳೆಯ ವಿಚಾರ ಗಳಿಂದ ಹಸನು ಗೊಳಿಸಲು ಪ್ರಯತ್ನಿಸ ಬೇಕು. ಸಮಸ್ಯೆ ಕೇವಲ ಕವನ ಕತೆ ಓದುವುದರಿಂದ ಪರಿಹಾರ ಆಗುವುದಿಲ್ಲ ಎಂಬ ತಮ್ಮ ಯೋಚನೆ ಮೆಚ್ಚುವಂತಹದ್ದು

  3. ಸಮಾಜದ ನಿಜದ ವಸ್ತು ಚಿತ್ರಣ ಸರ್. ಕ್ರಾಂತಿಕಾರಿ ಕವನ. ಮನಸಿನ ಕಸದ ತೊಟ್ಟಿ ಯನ್ನೂ ಒಳ್ಳೆಯ ವಿಚಾರ ಗಳಿಂದ ಹಸನು ಗೊಳಿಸಲು ಪ್ರಯತ್ನಿಸ ಬೇಕು. ಸಮಸ್ಯೆ ಕೇವಲ ಕವನ ಕತೆ ಓದುವುದರಿಂದ ಪರಿಹಾರ ಆಗುವುದಿಲ್ಲ ಎಂಬ ತಮ್ಮಯೋಚನೆ ಮೆಚ್ಚುವಂತದ್ದು

  4. ತಮ್ಮ ತಲೆಯ ಗೂಡಲ್ಲಿ ಮನಸಿನ ಆಳದಲ್ಲಿ ಎಸ್ಟು ಯೋಚನೆ… ಕವನ ಬಚ್ಚಿಟ್ಟಿದ್ದೀರಿ ಸರ್

  5. ನಿತ್ಯ ಸತ್ಯದ ಬದುಕಿನ ಚಿತ್ರಣ…ಅತ್ಯುತ್ತಮ ಕವನ ಸರ್

    ಜಯಶ್ರೀ ಪಾಟೀಲ

  6. ಕ್ರೂರ ವ್ಯವಸ್ಥೆಯನ್ನು ಪ್ರಶ್ನೆ ಮಾಡದ ಮೆದಳು ಬುದ್ಧಿ ನಿಜಕ್ಕೂ ಕಸದ ತೊಟ್ಟಿ ಸರ್

Leave a Reply

Back To Top