ಭಾರತಿ ಅಶೋಕ್ ಹೊಸಕವಿತೆ-ಸಂಕಥನ

ಕಾವ್ಯಸಂಗಾತಿ

ಭಾರತಿ ಅಶೋಕ್

ಸಂಕಥನ

ಆಕೆ ನಡೆದು
ಸಾಗಿದ ಹೆಜ್ಜೆಗಳ ಅನುಸರಿಸುತ್ತಿರುವೆ
ಒಮ್ಮೆ ಲಯದಲ್ಲಿ
ಮತ್ತೊಮ್ಮೆ ನಡೆಯಲಾಗದೆ ಲಯ ತಪ್ಪಿ
ಕುಸಿದು ಬಿಡುವೆ

ಕಣ್ಮುಚ್ಚಿ ಮನದ ಕೈಗಳಿಂದ ಹೆಜ್ಜೆಗಳನ್ನು ಸ್ಪರ್ಶಿಸುತ್ತೇನೆ ಭೂಮಿಯ ಆಳಕಿಳಿದ ಭಾರವಾದ ಹೆಜ್ಜೆಗಳವು

ಸಂಕತನಗಳ ಹೊತ್ತು
ನಡೆವಾಗ ಒಡೆದ ಪಾದಗಳ ಬಿರುಕುಗಳಿಂದ ಹರಿದ ರಕ್ತದ ಕಮಟು ಮೂಗಿಗೆ ರಾಚುತ್ತಲೇ ಮೈ ಮನವೆಲ್ಲ ಅವರಿಸಿ ನಾನು ‘ಆಕೆ’ ಆಗಿಬಿಡುವೆ.

‘ಆಕೆ’ಯಾದ ನಾನು ಮತ್ತೆ ನಡೆವೆ
ಅದೇ ಹೆಜ್ಜೆಗಳಗುಂಟ
ಅದೇ ಲಯ, ರಕ್ತದ ಅದೇ ಕಮಟು ಮತ್ತೆ ಮತ್ತೆ ಆವರಿಸುತ್ತ ನಡೆಯುತ್ತಲೆ ಇದ್ದೇನೆ

ಆಕೆಯ ಹೆಗಲೀಗ ನನ್ನದಾಗಿದೆ
ಅದೇ ಭಾರ ಹೊತ್ತ ಭಾವ
ಮತ್ತೊಂದು ಹೆಗಲಿಗೆ ಮುಟ್ಟಿಸುವ ಹೊಣೆ ಹೊತ್ತು
ಸಾಗುತ್ತಿದ್ದೇನೆ ಮತ್ತೊಂದು ತಿರುವಿನೆಡೆಗೆ
ಭಾರದ ಹೆಜ್ಜೆಗಳನ್ನಿಡುತ್ತ
ಲಯ ತಪ್ಪದೆ, ಒಡೆದ ಪಾದಗಳ ಸಂಧುಗಳಿಂದ ರಕ್ತ ಸ್ರವಿಸುತ್ತಿದೆ‌- ಹಿಂದೆ ಬರುವವರಿಗದು ಗುರುತಾಗಲಿ


ಭಾರತಿ ಅಶೋಕ್.

One thought on “ಭಾರತಿ ಅಶೋಕ್ ಹೊಸಕವಿತೆ-ಸಂಕಥನ

Leave a Reply

Back To Top