ಸಿದ್ಧಗೊಳ್ಳುತ್ತಿದೆ ಹಂಪಿನಾಡು 3ನೇ ಗುರುಕುಲ ಸಮ್ಮೇಳನಕ್ಕೆ

ಇತರೆ

ಸಿದ್ಧಗೊಳ್ಳುತ್ತಿದೆ ಹಂಪಿನಾಡು

3ನೇ ಗುರುಕುಲ ಸಮ್ಮೇಳನಕ್ಕೆ

ಗುರುಕುಲ ಕಲಾ ಪ್ರತಿಷ್ಟಾನ (ರಿ) ಕೇಂದ್ರ ಸಮಿತಿ – ತುಮಕೂರು ಹಮ್ಮಿಕೊಂಡಿರುವ
ಅಖಿಲ ಭಾರತ 3ನೇ ಗುರುಕುಲ ಕಲಾ ಸಮ್ಮೇಳನವನ್ನು ಹಂಪಿ ವಿರೂಪಾಕ್ಷ ದೇವಾಲಯ ಸಮೀಪ ಇರುವ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಇದೆ ತಿಂಗಳು 18 & 19 ರಂದು ಜರುಗಲಿದೆ.
ನಿಸ್ವಾರ್ಥದಿಂದ ಕಲೆ, ಸಾಹಿತ್ಯ, ಶಿಕ್ಷಣ, ಕೃಷಿ, ಸಾಮಾಜಿಕ ಇತ್ಯಾದಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರತಿಭಾವಂತ ಮತ್ತು ಸಾಧನೆಗೈದ ಮಹನೀಯರಿಗೆ ಪ್ರೋತ್ಸಾಹ ನೀಡುತ್ತಾ ಕನ್ನಡವನ್ನು ಉಳಿಸುವ, ಬೆಳೆಸುವ ಕಾರ್ಯ ಗುರುಕುಲ ತಂಡ ಮಾಡುತ್ತಾ ಬಂದಿದೆ. ಹಾವೇರಿ, ತುಮಕೂರು, ಬೆಂಗಳೂರು ಇತ್ಯಾದಿ ಘಟಕಗಳನ್ನು ರಚಿಸಿ, ಸಾಹಿತ್ಯದ ವಿಭಿನ್ನ ಪ್ರಕಾರದ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಪ್ರೋತ್ಸಾಹ ಮತ್ತು ತಮ್ಮದೇ ವೇದಿಕೆ ಕಲ್ಪಿಸಿ ಸಮಾಜಮುಖಿ ಕೆಲಸ ಮಾಡುತ್ತಾ ಸೈ ಎನಿಸಿಕೊಂಡಿದೆ.
ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಹುಲಿಯೂರುದುರ್ಗ ಲಕ್ಷ್ಮಿ ನಾರಾಯಣ್ ರವರು, ಸಂಸ್ಥಾಪಕ ಕಾರ್ಯಾಧ್ಯಕ್ಷರಾದ ಡಾll ಶಿವರಾಜ ಗೌಡ್ರು, ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ್ ಬಡಿಗೇರ್ ರವರು, ಗೌರವ ಸಲಹೆಗಾರರು, ಸದಸ್ಯರು ಹಾಗೂ ಕಾರ್ಯಕಾರಿ ಮಂಡಳಿ ಸೇರಿದಂತೆ ಅನೇಕರು ಗುರುಕುಲ ಕಲಾ ಪ್ರತಿಷ್ಟಾನದಲ್ಲಿ ತ್ಯಾಗ ಮತ್ತು ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಇದರಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ನೂರಾರು ಸಾಹಿತಿಗಳಿಗೆ ತಮ್ಮ ಕಲೆಯನ್ನು ಅಭಿವೃದ್ಧಿಗೊಳಿಸಲು ಪ್ರತಿ ತಿಂಗಳಿಗೆ , ಪ್ರತಿ ಹಬ್ಬ ಹರಿದಿನಕ್ಕೆ ಆನ್ಲೈನ್ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಅಭಿನಂದನೆ ಸಲ್ಲಿಸಿ, ಸನ್ಮಾನಿಸಲಾಗುತ್ತದೆ. ಇದರಿಂದ ಹೆಚ್ಚು ಹೆಚ್ಚು ಸಾಹಿತಿಗಳನ್ನು ಜಗತ್ತಿಗೆ ಪರಿಚಯಿಸುತ್ತಿದೆ.
ಈಗಾಗಲೇ 2 ಸಮ್ಮೇಳನವನ್ನು ಯಶಸ್ವಿಯಾಗಿ ಮುಗಿಸಿದ ಗುರುಕುಲ ತಂಡ 3 ನೇ ಸಮ್ಮೇಳನ ಅದ್ಧೂರಿಯಾಗಿ ನಡೆಸಲು ಯೋಜನೆ ಹಾಕಿದೆ. ಕವಿಗೋಷ್ಠಿ, ವಿಚಾರಗೋಷ್ಠಿ, ಅಧ್ಯಕ್ಷರ ಭಾಷಣ, ಹಂಪಿ ದರ್ಶನ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಪ್ರಶಸ್ತಿ ಪ್ರಧಾನ, ಭರತನಾಟ್ಯ, ನಾಟಕ, ಗಾಯನ, ಯೋಗ ನೃತ್ಯ, ಡೊಳ್ಳಿನ ಪದ ಹೀಗೆ ಹಲವಾರು ಪ್ರಕಾರಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಈ ಸಮ್ಮೇಳನದ ವಿಶೇಷ.
ಎಲ್ಲ ಕವಿ ಮನಗಳಿಗೆ ಸ್ವಾಗತ ಬಯಸಲು “ಬಣ್ಣಿರನ್ನ ಬಣ್ಣಿರಕ್ಕ ಹಂಪಿ ನಾಡಿಗೆ” ಸಾಹಿತ್ಯ ರಚಿಸಿ ಸಂಯೋಜನೆ ಮಾಡಿ ಎಲ್ಲೆಡೆ ಬಿತ್ತರಿಸಿ ಆಹ್ವಾನ ನೀಡುತ್ತಿರುವ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಬಡಿಗೇರರವರು ಎಲ್ಲರ ಗಮನ ಸೆಳೆದಿದ್ದಾರೆ. ಸಮ್ಮೇಳನಕ್ಕೆ ಬಂದು ಹೋಗುವ ಕವಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ, ತಲುಪಲು ಮಾರ್ಗಸೂಚಿಯನ್ನು ಈಗಾಗಲೇ ಬಿತ್ತರಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಪೂರ್ವಭಾವಿ ಸಭೆ ನಡೆಸಿ , ಗಣ್ಯರಿಗೆ ಆಹ್ವಾನ, ಶ್ರೀ ಗಳ ಅನುಮತಿ, ಆಶೀರ್ವಾದ, ಕಾರ್ಯಕ್ರಮದ ಸಂಪೂರ್ಣ ಯೋಜನೆ ಮಾಡಿ ಹಗಲಿರುಳು ಶ್ರಮಿಸುತ್ತಿರುವ ಎಲ್ಲ ಸದಸ್ಯರಿಗೆ ಮತ್ತು ಸಂಸ್ಥಾಪಕರಾದ ಶ್ರೀ ಹುಲಿಯೂರುದುರ್ಗ್ ಲಕ್ಷ್ಮಿ ನಾರಾಯಣ್ ರವರಿಗೆ ವಿಶೇಷ ಧನ್ಯವಾದಗಳು.


Leave a Reply

Back To Top