ಮನ್ಸೂರ್ ಮೂಲ್ಕಿ ಕವಿತೆ-ನನ್ನ ಮನೆ

ಕಾವ್ಯ ಸಂಗಾತಿ

ಮನ್ಸೂರ್ ಮೂಲ್ಕಿ

ನನ್ನ ಮನೆ

ಗುಡಿಸಲ್ನೋಳಗೆ ಮಲಗಿದೆನೆಂದರೆ
ಮೋಡದಿ ತೇಲಿದ ಹಾಗೆ
ಚಂದ್ರನು ಹತ್ತಿರ ಚುಕ್ಕಿಯು ಹತ್ತಿರ
ಬಾನೇ ನನ್ನ ಪರ್ಪಂಚ.

ನಗುವ ಚಂದಿರ
ಬೀರುವ ಬೆಳಕು
ನನ್ನ ಗುಡಿಸಲ ಸೊಗಸು
ಬದುಕು ಬೆಳದಿಂಗಳ ಬೆಳಕು.

ನಲಿಯುವ ಚಂದಿರ
ಉದುರುವ ಚುಕ್ಕಿ
ಪ್ರತಿದಿನ ನನಗೆ ಹಬ್ಬ ಹಬ್ಬ
ನನಗದುವೇ ಕಬ್ಬ ಕಬ್ಬ.

ಚೊಚ್ಚಲ ನಗುವಿನ
ಮಧು ಮಂಚವು
ನನ್ನ ಗುಡಿಸಲ ನೆಲವು
ಬಾಳಿನ ಸುಂದರ ಗುಡಿಯು.

ಬೀಸುವ ಗಾಳಿಗೆ
ಕೃತಿಕ ಮಳೆಯು ನೆಲಕ
ಮಣ್ಣಿನ ಸುವಾಸನೆ
ಮಲ್ಲಿಗೆಯಂತೆ ಎನ್ನ ಮನಕ.


ಮನ್ಸೂರ್ ಮೂಲ್ಕಿ

Leave a Reply

Back To Top