ನಾಗರಾಜ ಜಿ. ಎನ್. ಬಾಡ-ಅಂತರ್ಯಾನ…

ಕಾವ್ಯ ಸಂಗಾತಿ

ನಾಗರಾಜ ಜಿ. ಎನ್. ಬಾಡ

ಅಂತರ್ಯಾನ…

ಜನರ ಮನೋ ಧರ್ಮವೇ ವಿಚಿತ್ರ
ಒಮ್ಮೊಮ್ಮೆ ಒಂದೊಂದು ಪಾತ್ರ
ಎದುರಲ್ಲಿ ಹೊಗಳುವರು
ಬೆನ್ನ ಹಿಂದೆ ತೆ(ಬೊ)ಗಳುವರು
ಸಿಹಿ ಮಾತನಾಡುವರು
ಕಹಿ ಸತ್ಯ ಹೇಳರು
ನಗು ನಗುತ ವಂಚಿಸುವರು
ಬೆನ್ನಿಗೆ ಚಾಕು ಇರಿಯುವರು
ಏರಿಸುವ ಜನಗಳೆ
ಬೀಳಿಸುವರು ನಿನ್ನ
ಗೆದ್ದಾಗ ಜೊತೆಗೆ ಇದ್ದು
ತಮ್ಮದೇ ಗೆಲುವು ಎಂಬಂತೆ
ಸಂಭ್ರಮಿಸುವರು
ಸೋತಾಗ ದೂರ ಓಡುವರು
ಹೀಯಾಳಿಸಿ ನಗುವರು
ಸೋಲು ನೋವು
ಎಂದೆಂದಿಗೂ ಸ್ವಂತ
ಏರುವುದು.. ಜಾರುವುದು
ಈ ಜಗದ ಧರ್ಮ..
ಈ ಜಗದ ಮರ್ಮ
ರಾಗ ದ್ವೇಷ ತೊರೆದಾಗ
ಬದುಕು ನಿತ್ಯ ನಿರ್ಮಲ
ಎಲ್ಲವೂ ಇಲ್ಲಿ ಸಫಲ
ಎಲ್ಲವೂ ಇಲ್ಲಿ ವಿಫಲ
ನಿಷ್ಕರುಣೆಯ ಜೀವ ಜಾಲ
ಸಂತೆ ಯೊಳಗಿನ ಕಂತೆ
ಬಗೆದಷ್ಟು ಚಿಂತೆ
ಕಂಡು ಕಾಣದಂತಿರೆ
ಬದುಕಲ್ಲಿ ನಿಶ್ಚಿಂತೆ


ನಾಗರಾಜ ಜಿ. ಎನ್. ಬಾಡ

One thought on “ನಾಗರಾಜ ಜಿ. ಎನ್. ಬಾಡ-ಅಂತರ್ಯಾನ…

  1. ಬದುಕೇ ಹೀಗೆ……. ನಾವು ಅದರ ಜೊತೆ ಸಾಗುವವರು…. ಅಲ್ಲಿ ಎಲ್ಲವೂ ಅನಿವಾರ್ಯ. ನಿಲುವು ಮಾತ್ರ ನಮ್ಮದು. ಎಲ್ಲಕ್ಕಿಂತ ಹೆಚ್ಚಾಗಿ ಬದುಕಿನ ಪ್ರೀತಿ ನಿಶ್ಚಿಂತೆಯಾದರೆ ಅದೊಂದು ಖುಷಿ. ಜೊತೆಗೆ ಎಲ್ಲವ ಗೆದ್ದ ಅನುಭವ ಎನಿಸುತ್ತದೆ. ಪೂರ್ಣ ಅನುಭವ ಹಲವು ದಾರಿಗಳ ತೋರುತ್ತದೆ. ನಿಜದ ಅರಿವೊಳಗೆ ಅನುಭವದ ಹರಿವು ಹೆಚ್ಚಿದಂತೆಲ್ಲಾ ಸಮಯ ಆಪ್ತವಾಗುತ್ತದೆ. ನಿಶ್ಚಿಂತೆ ಜೀವಿತದ ಬಂಧುತ್ವವನ್ನು ಉಳಿಸಿ ಬೆಳೆಸುವ ಕಾರ್ಯದೊಟ್ಟಿಗೆ ನಮ್ಮನ್ನು ಬೆಳೆಸುತ್ತದೆ….ಈ ವಿಚಾರಗಳ ಕವನದ ಸಾಲುಗಳು ಚೆನ್ನಾಗಿದೆ.

    ನಾಗರಾಜ ಬಿ.ನಾಯ್ಕ.
    ಹುಬ್ಬಣಗೇರಿ.
    ಕುಮಟಾ.

Leave a Reply

Back To Top