ಕಾವ್ಯ ಸಂಗಾತಿ
ಉತ್ತಮ ಎ. ದೊಡ್ಮನಿ
ಕಪ್ಪು ಬಿಳುಪಿನ ಆಟ
ಹೊತ್ತು ಗೊತ್ತಿಲ್ಲದ ಸಮಯದಲ್ಲಿ
ಸದಾ ಬದುಕಿಗಾಗಿ ಬಡದಾಡುವವರಿಗೆ
ಹಸುವಿನ ಚಿಂತೆ, ಗ್ರಹಣ ಹಿಡಿದರೆಷ್ಟು ಬಿಟ್ಟರೆಷ್ಟು ಬದುಕಬೇಕು ತಮ್ಮ ಉಳಿವಿಗಾಗಿ
ರೋಡಲ್ಲಿ ತಿರುಗುವ ಭಿಕ್ಷುಕರಿಗೆ
ಗುಡಿಸಿಲಲ್ಲಿ ಮಲಗಿರುವ ಹಸಿದ
ಹೊಟ್ಟೆಗೆ ಒಂದು ಹೊತ್ತಿನ ಊಟಕ್ಕಾಗಿ
ಬಿಡದು ಈ ಗ್ರಹಣ
ಈ ನೆಲದ ಮೇಲೆ ವಾಸಿಸುವ
ಪ್ರಾಣಿ, ಪಕ್ಷಿಗಳಿಗೆ ಇಲ್ಲದ
ಗ್ರಹಣ ಈ ಮಾನವನ ಮೆದುಳಿಗೆ
ಹಿಡದಿದೆ ಈಗ ಬಿಡದಾಗಿದೆ
ಬೆಳ್ಳಿ, ಬಂಗಾರ, ರೊಕ್ಕ ರೂಪಾಯಿ
ದವಸ ಧಾನ್ಯಕ್ಕೆ ಮುತ್ತಿಕೊಳ್ಳದ ಗ್ರಹಣ
ಭೂಮಿ ಒಳಗೆ ಸಿಗುವ ಪರಿಶುದ್ಧ ನೀರಿಗೆಕೇ
ನೀರೆಂದರೆ ಅಷ್ಟು ಪ್ರೀತಿನೇ
ವೈಚಾರಿಕ ವೈಜ್ಞಾನಿಕವಾಗಿ ವಿಚಾರಿಸದೆ ಮೂಢನಂಬಿಕೆಯಲ್ಲಿ ಜೇಡರ ಬಲೆಯಂತೆ
ಸಿಲುಕಿರುವ ಮನುಜ ಕುಲವೇ
ಗ್ರಹಣ ಕಪ್ಪು ಬೆಳಕಿನ ಆಟ ಪ್ರಕೃತಿ ಜೊತೆ
ಉತ್ತಮ ಎ. ದೊಡ್ಮನಿ