ಕಾವ್ಯ ಸಂಗಾತಿ
ಬಾಗೇಪಲ್ಲಿ—
ಗಜಲ್
ಗಜಲ್
(ಕೈ ತುರಿತಕೆ ಬರೆದೊಂದ ಕಾಫಿಯಾನ)
ನಾ ಬಿಡುತಿಹ ನಿಟ್ಟುಸಿರೆಲ್ಲಾ ಒಂದು ಬಿರುಗಾಳಿಯಂತೆ
ದಾತ ಇದನು ಅರಿತು ಇರುವ ಏನೂ ಅರಿಯದವನಂತೆ
ಭಾಗ್ಯವಂತರವರು ಪ್ರೀತಿಗೆ ಬದಲಲಿ ಪ್ರೀತಿ ದೊರೆತವರು
ನತದೃಷ್ಟ ನಾ ಹೂವ ಬಯಸಿ ಮುಳ್ಳುನು ಪಡೆದವನಂತೆ
ಆಗಾಗ ಸಹಾಯ ಹಸ್ತವ ನೀಡಿದಲರೆಲ್ಲಾ ತೊರೆದರೆನ್ನನು
ಪ್ರಿಯತಮೆ ತಾನು ಬಾರದೆ ನೀಡಿದ ನೆಪ ‘ನಾತಡೆದೆನಂತೆ’
ಹೆಣ್ಣಿಗೆ ಪ್ರೀತಿಗಿಂತ ಸಂಪೂರ್ಣ ಹೆಣ್ಣಾಗುವ ಬಯಕ ಹೆಚ್ಚು
ತೋರಿದ ಪ್ರೇಮವೆಲ್ಲಾ ತಾಯಾಗುವ ಹಂಬಲ ಮಾತ್ರವಂತೆ.
ಕೃಷ್ಣಾ! ಹೆಣ್ಣು ಕೊನೆಗೂ ಉಳಿಯಿತು ಅಂತೆ ಕಂತೆಯಾಗಿಯೆ
ಪ್ರಶ್ನೆ ಉಳಿಯಿತು ಹೇಗೆ ಗೋಪಿಯರ ತಾ ನಿಭಾಯಿಸಿದನಂತೆ.
ಬಾಗೇಪಲ್ಲಿ.
Super Gazal