ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ದೀನನಲ್ಲ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ದೀನನಲ್ಲ

ದೀನನಲ್ಲ
ದೇವನಿವನು
ಬಸವ ನಾಡಿನ
ಶರಣನು
ಮಾತು ನುಂಗಿ
ಮೌನ ಮೆರೆದನು
ಸತ್ಯ ಸಮತೆಯ
ಹಣತೆಯು
ನಮ್ಮನ್ನುಣಿಸಿ
ಹೊದಿಸಿ ನಗಿಸಿ
ಹಸಿವಿನಿಂದ
ಕುಳಿತನು
ಏನು ತಪವೋ
ವೀರ ವೃತವೋ
ದೇವ ಬಯಲ

ಬೆರೆತನು


ಡಾ ಶಶಿಕಾಂತ ಪಟ್ಟಣ ರಾಮದುರ್ಗ

4 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ದೀನನಲ್ಲ

  1. ಹಸಿವು ಮುಕ್ತ ದೇಶ ನಿರ್ಮಿಸಲು ಸಂಕಲ್ಪ ಮಾಡಿ ಕೊಳ್ಳಲು ವಿನಂತಿ

    ವೀಣಾ

  2. ದೀನನಲ್ಲ
    ದೇವನಿವನು
    ಬಸವನಾಡಿನ
    ಶರಣನು

    ಎಲ್ಲರೊಳಗೆ ದೇವರಿದ್ದಾನೆ…. ಎಲ್ಲರೂ ಶಿವ ಶರಣರು… ಎನ್ನುವ ಪರಮಸತ್ಯ ತಿಳಿಸುವ ಕವನ ಮನವ ತಟ್ಟಿತು… ಸರ್

    ಸುಶಿ

Leave a Reply

Back To Top