ಮಕ್ಕಳ ದಿನಾಚರಣೆಯ ವಿಶೇಷ

ಬಾಗೇಪಲ್ಲಿ ಕವಿತೆ

ಇಂದು “ಮಕ್ಕಳ ದಿನಾಚರಣೆ” ಪ್ರತಿಯೊಬ್ಬರಿಗೂ ಪುನಃ ಆ ವಯಸ್ಸಿಗೆ ಹೋಗುವ ಆಸೆ ಒಮ್ಮೊಮ್ಮೆ ಬರುತ್ತದೆ.
ಇಲ್ಲಿನ ಎಲ್ಲಾ ಗಜಲ್ಕಾರರೂ ಅಂಬರದ ತಾರೆಗಳೇ ಸರಿ.ಆದರೂ ಒಮ್ಮೆ ಕೆಳಗಿಳಿದು ಪುಟ್ಟ ಮಕ್ಕಳಾಗೋಣ, ಪ್ರಸಿದ್ಧ ಕವಿಗಳು ಶಿಶುಗೀತೆ ಬರೆದಂತೆ ನಾವು ಅವರಿಗಾಗಿ ಗಜಲ್ ಬರೆಯೋಣ.


ಇದೋ ನನ್ನ ಚಿಣ್ಣರಿಗೆ
ಪೂರ್ಣ ಮತ್ಲಾ ಗಜಲ್

ಅದೋ ನೋಡಲ್ಲಿ ಅಂಬರ
ಕಾಣುವವನು ಅಲ್ಲಿ ಚಂದಿರ

ನೋಡಲು ಅವನೆಷ್ಟು ಸುಂದರ
ನಭವೇ ಆತನಿರುವ ಮಂದಿರ

ಹುಣ್ಣಿಮೆ ದಿನ ಅದು ಬಂದರ
ಆಗುವ ಆತ ಚಿನ್ನದ ಉಂಗರ

ಬಿಡದೆ ಇಣುಕುವನೆಲ್ಲಾ ಕಂದರ
ಹಾಕುವ ಅಲ್ಲಿಯೂ ಸಹ ಲಂಗರ

ಧರಸಿಹ ತಲೆಯಲಿ ಈತನ ಶಂಕರ
ಕೃಷ್ಣಾ! ನೆನಪಿರಲಿ ಚೌತಿಯ ಅಂತರ


ಬಾಗೇಪಲ್ಲಿ

Leave a Reply

Back To Top