ಕೇಳಿರಿ ಕೇಳಿರಿ ಮುದ್ದು ಮಕ್ಕಳೇ
ಡಾ ಅನ್ನಪೂರ್ಣಾ ಹಿರೇಮಠ
ಕೇಳಿರಿ ಕೇಳಿರಿ ಮುದ್ದು ಮಕ್ಕಳೇ
ನಕ್ಷತ್ರಗಳ ತೇಜವ ಪಡೆದು ಮಿನುಗಿದವನ
ಸಪ್ತಋಷಿಗಳ ತೇಜಸ್ಸಿನಿಂದ ಬೆಳಗಿದವನ
ಭುವನೇಶ್ವರಿ ಒಡಲಲಿ ಮುತ್ತಾದವನ
ಕಥೆಯನು ಕೇಳಿರಿ ಚಿತ್ತಗೊಟ್ಟು//
ದೇವರ ಕೃಪೆಯ ಕಂದನಾಗಿ
ಮಡಿಲ ಬೆಳಗಿದ ರತ್ನದಂತೆ
ಜ್ಞಾನ ತುಂಬಿದ ಕಳಸದಂತೆ
ಹೊಳೆಯತೊಡಗಿದ ದಿನದಿನ
ಕೇಳಿರಿವನ ಗಾಥೆಯ ಮನಸನಿಟ್ಟು//
ಎಲ್ಲ ವಿದ್ಯೆ ಕರಗತ ಇವನಿಗೆ
ಇವನ ಮೀರಿಸಲಾಗದು ಏಕಾಗ್ರತೆಯಲಿ
ಹಿಂದೂಸ್ತಾನದ ಸಿಂಧುವಾಗಿ ಬೆಳೆಯತೊಡಗಿದ
ಗುರುಹಿರಿಯರ ತಾಯಿಯ ಮುದ್ದಿನ ಮಗನಾಗಿ
ಜಗ ದೇವಾಲಯದಲಿ ಮಿಂಚತೊಡಗಿದ ಕೇಳಿರಿ//
ಸಾರೋಟಿನ ಸಾರಥಿಯಾಗುವ ಆಸೆಯಲಿ
ಜಗ ಪರ್ಯಟನದ ಗುರಿ ಹೊಂದಿ
ದೇವನಿರುವಿನ ಕುರುಹು ತೋರುವ ಗುರುವ
ಹುಡುಕುತ ಆತ್ಮ ದೇಹದ ಸಂಬಂಧ ಕೆದಕಿದ
ಮನಮೆಚ್ಚಿದ ರಾಮಕೃಷ್ಣರ ಗುರುವೆಂದು ಸ್ವೀಕರಿಸಿದ//
ಹಿಂದೂ ಸಾಮ್ರಾಜ್ಯದ ಏಳಿಗೆ ಬಯಸಿದ
ಜಗತ್ತೆಲ್ಲ ಸುತ್ತಿ ಸತ್ಯ ಸಾರುತ ಸಾಗಿದ
ವಾಗ್ಮಿ ದೈವೀಪುರುಷ ದೇವದೂತನಾದ
ರಾರಾಜಿಸಿ ರಂಜಿಸಿ ಯುವಶಕ್ತಿಯ ಎಚ್ಚರಿಸಿ
ಯುಕ್ತಿ ಶಕ್ತಿಗಳಿಸಿ ದೇಶದೇಳ್ಗೆಗೆ ಬಾಳಿ ಎಂದನೀವ ಕೇಳಿ//
ಡಾ ಅನ್ನಪೂರ್ಣಾ ಹಿರೇಮಠ
Super