ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಗುವ ಹೂಗಳು !

ಕಾಡಜ್ಜಿ ಮಂಜುನಾಥ

ಮುಗ್ದ ಮನಸಿನ
ಶುದ್ದ ಹೃದಯದ
ನಗುವ ಹೂಗಳು
ಮಕ್ಕಳು !!

ಕೋಪ ತಾಪವಿರದ
ಸ್ನೇಹ ಪ್ರೀತಿಯ ಎದೆಯ
ಹೊಳೆವ ನಕ್ಷತ್ರಗಳು
ಮಕ್ಕಳು !!

ದ್ವೇಷ ಅಸೂಯೆಯಿಲ್ಲದ
ಜಾತಿ ಧರ್ಮದ ಸೋಂಕು
ಅಂಟದ;
ರವಿಯ ಕಿರಣಗಳು
ಮಕ್ಕಳು !!

ಸ್ವಾರ್ಥವಿಲ್ಲದ ಸ್ನೇಹ ಹಸ್ತದ
ಮೇಲುಕೀಳಿನ ಗಾಳಿ ತಾಕದ
ಹಸಿರು ಗಿಡಗಳು
ಮಕ್ಕಳು !!

ನಗುತಾ ನಲಿಯುತ
ಇಲ್ಲಗಳ ಮರೆಯುತ
ಇದ್ದುದರಲ್ಲಿಯೇ ಖುಷಿಯಾಗಿರುವ
ದೈವ ಮನಗಳು
ಮಕ್ಕಳು !!


ಕಾಡಜ್ಜಿ ಮಂಜುನಾಥ,

About The Author

Leave a Reply

You cannot copy content of this page

Scroll to Top