ಸುಧಾ ಪಾಟೀಲ
ಮುದ್ದುಕಂದ
ಪುಟ್ಟ ಪಾದಗಳ ಹೊನ್ನ ಹೆಜ್ಜೆಯನಿಕ್ಕುತ ಬರುವ
ಮುದ್ದು ಕಂದನ ಎತ್ತಿ ಮುದ್ದಾಡಿಸಲೆ
ಕೆಂಪು ಕೆಂಪಿನ ಬಣ್ಣವ ಹೊತ್ತು
ಕಾಲOದಿಗೆಯ ಆಡಿಸುತ ಬರುವ
ಮುದ್ದು ಕಂದನ ಎತ್ತಿ ಲಲ್ಲೆಗರಿಯಲೆ
ಶ್ರೀಗಂಧದ ತೊಟ್ಟಿಲಲಿ ನಿನ್ನ ತೂಗುತ
ಬೆಳ್ಳಿಯ ಬಟ್ಟಲಲಿ ಅಮೃತವ ಕುಡಿಸುತ, ಮಲ್ಲಿಗೆಯOತೆ ಬಿರಿಯುವ
ನಿನ್ನ ಮುದ್ದು ತುಟಿಗಳ, ಹಾಲುಗಲ್ಲಗಳ
ನೋಡಿ, ಹರ್ಷಿಸುವ ಸೊಗಡು ಯಾರಿಗೆ
ಬೇಡ ಹೇಳು
ಮನೆಗೆ ಬಂದ ಮಹಾಲಕ್ಷ್ಮಿ ಎನ್ನಲೆ
ಜ್ಞಾನ ಹೊತ್ತು ತಂದ ಸರಸ್ವತಿ ಎನ್ನಲೆ
ಸುಸಂಸ್ಕೃತ ಗುಣಗಳುಳ್ಳ ಗೌರಿ ಎನ್ನಲೆ
ಸಕಲರನ್ನೂ ಕಾಪಾಡುವ ಆದಿಶಕ್ತಿ ಎನ್ನಲೆ
ಅಂಬೆಗಾಲಿಕ್ಕುತ ಬರುವ ಮುದ್ದಿನ ಅರಗಿಣಿ ನೀನು, ಹೊನ್ನಕಲಶವಿಟ್ಟು ಬರುವ ಅದೃಷ್ಟವಂತೆ ನೀನು, ದೇವ
ಕಳಿಸಿದ ದೇವದೂತೆ ನೀನು
ಸುಧಾ ಪಾಟೀಲ
Excellent poetry
ಧನ್ಯವಾದಗಳು