ಅನುಜನಾರ್ಧನ್ ನೆಟ್ಟಾರು ಕವಿತೆ ದೀಪಾವಳಿ

ಕಾವ್ಯ ಸಂಗಾತಿ

ಅನುಜನಾರ್ಧನ್ ನೆಟ್ಟಾರು

ದೀಪಾವಳಿ

ಹಚ್ಚಿಟ್ಟ ಒಲವ ಹಣತೆಗಳ ಸಾಲು
ಕಾಡುತ್ತಿದೆ ಎನ್ನದೆಯಾ ಭಾವಗಳ ಹೊನಲು
ಅನುರುಣಿಸಿ ಮೇಳೈಸಿ ಸಾಗುತಿದೆ ದೀಪ…..
ಪ್ರೇಮದ ತೈಲವೆರೆದು ಬೆಳಗುತಿದೆ ರೂಪ…..

ಬಾಲ್ಯದ ದಿನಗಳಲ್ಲಿ ಬೆಳಗಿಸಿದ ಹಣತೆ
ಅಮ್ಮನ ಪ್ರೇಮದಲಿ ಜಗವೆಲ್ಲ ಬೆಳಕೆ……
ಆ ಪುಟ್ಟ ಗುಡಿಸಲಲಿ ಸಿರಿವಂತ ಮನವು…
ಪ್ರೇಮದಭ್ಯಂಜನದಲಿ ತನುವೆಂತು ಸುಖವು..

ಅಂಧಕಾರದಲಿ ನೀನೆಂದೂ ಹುಣ್ಣಿಮೆ..
ಮೌಡ್ಯವ ತೊಲಗಿಸಲು ನೀ ಬರುವೆ ಮೆಲ್ಲನೆ
ಜಗದೊಲವು ಬೆಳಗಲಿ…. ಶೂನ್ಯತೆಯು ಸರಿಯಲಿ
ಅಗಮ್ಯ ಚೇತನವು ಶೃತಿಯಾಗಲಿ..

ಭ್ರಾತೃತ್ವ ಬೆಸೆಯಲಿ.. ತಾಮಸವು ಕಳಚಲಿ…
ಮನೆ ಮನವು ಬಾಡದ ಹೂವಾಗಲಿ
ಬಡತನದ ಬೇಗೆಯಲಿ.. ಸುಖದ ಸೊಗಡುಗಳಲ್ಲಿ..
ಸಾಮರಸ್ಯದ ಬೀಜ ಮೊಳೆಯುತಿರಲಿ…..

ಅನುಜನಾರ್ಧನ್ ನೆಟ್ಟಾರು

Leave a Reply

Back To Top